ಕೆಲದಿನಗಳ ಹಿಂದಷ್ಟೇ ಇಬ್ಬರೂ ಬಂದೂಕು ಹಿಡಿದು ಹೆದ್ದಾರಿಯಲ್ಲಿ ನಿಂತು ಗುಂಡು ಹಾರಿಸಿ ಶೋಕಿ ಮಾಡಿದ್ದರು. ಸಾರ್ವಜನಿಕರು ಅದರ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗಿಳಿದಿದ್ದ ಪೊಲೀಸರು ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.