ಪೊಲೀಸ್ ಕ್ವಾಟ್ರಸ್ ನಲ್ಲೇ ಕಳ್ಳರ ಕೈಚಳಕ: ದೂರು ದಾಖಲು

ಶುಕ್ರವಾರ, 1 ಅಕ್ಟೋಬರ್ 2021 (21:30 IST)
ಬೆಂಗಳೂರು: ನಗರದ ಪೊಲೀಸ್ ಕ್ವಾಟ್ರಸ್ ನಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಪೊಲೀಸ್ ಪೇದೆಯ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. ಶೇಷಾದ್ರಿಪುರಂ ನ ಆನಂದರಾವ್ ವೃತ್ತದ  ಪೊಲೀಸ್ ಕ್ವಾಟ್ರಸ್ ನಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
 
ಸಿಸಿಟಿವಿ ಇಲ್ಲ:
 
ನಗರದ ಪೊಲೀಸ್ ಕ್ವಾಟ್ರಸ್ ನಲ್ಲಿ ಸಿಸಿಟಿವಿ ಇಲ್ಲದಿರುವುದನ್ನು ಬಂಡವಾಳ ಮಾಡಿಕೊಂಡ ಕಳ್ಳರು ಪೊಲೀಸರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ ಎನ್ನಲಾಗುತ್ತಿದೆ. 
 
ಬೀಗ ಮುರಿದು ಕಳ್ಳತನ: 
 
ಪೊಲೀಸ್ ಕ್ವಾಟ್ರಸ್ ನಲ್ಲಿ ವಾಸವಿರುವ ಹೆಡ್ ಕಾನ್ಸ್ ಟೇಬಲ್ ರೈತರು ಭಾರತ್ ಬಂದ್ ಕರೆ ಕೊಟ್ಟ ದಿನ ಬೆಳಗ್ಗೆ 6 ಗಂಟೆಗೆ ಕರ್ತವ್ಯಕ್ಕೆ ತೆರಳಿದ್ದರು. ಅಂದು ರಾತ್ರಿ  ತಮ್ಮ ಸ್ನೇಹಿತರ ಮನೆಯಲ್ಲಿ ಉಳಿದುಕೊಂಡು ಮಾರನೆಯ ದಿನ ಮನೆಗೆ ಮರಳಿದ್ದರು.  ಮನೆಗೆ ಬಂದು ನೋಡಿದಾಗ ಬೀಗ ಮುರಿದು  ಮನೆಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ.  
 
ಚಿನ್ನ, ಬೆಳ್ಳಿ, ಮೊಬೈಲ್ ಫೋನ್  ಕಳವು: 
 
ಕಳ್ಳರು ಮನೆಯಲ್ಲಿದ್ದ ಚಿನ್ನ, ಬೆಳ್ಳಿ, ಮೊಬೈಲ್ ಫೋನ್ ಸೇರಿ ಸುಮಾರು 85 ಸಾವಿರ ರೂ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಹೆಡ್ ಕಾನ್ಸ್ ಟೇಬಲ್ ಮಾರುತಿ  ಶೇಷಾದ್ರಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ