ಬಿಬಿಎಂಪಿಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ 8 ಕೋಟಿ ತೆರಿಗೆ ವಂಚನೆ?

ಶುಕ್ರವಾರ, 13 ಆಗಸ್ಟ್ 2021 (14:31 IST)
ಸ್ಯಾಂಡಲ್ ವುಡ್ ನ ಕೋಟಿ ನಿರ್ಮಾಪಕರಲ್ಲಿ ಒಬ್ಬರಾಗಿರುವ ರಾಕ್ ಲೈನ್ ವೆಂಕಟೇಶ್ ಆಸ್ತಿ ಕುರಿತು ತಪ್ಪು ಮಾಹಿತಿ ನೀಡಿ ಬೃಹತ್ ಬೆಂಗಳೂರು ನಗರ ಪಾಲಿಕೆಗೆ ತೆರಿಗೆ ವಂಚಿಸಿದ ಗಂಭೀರ ಆರೋಪಕ್ಕೆ ಸಿಲುಕಿದ್ದಾರೆ.
ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತೆರಿಗೆ ವಂಚನೆ ಮಾಡಿರುವ ಕುರಿತ ದಾಖಲೆಗಳನ್ನ ಬಿಡುಗಡೆ ಮಾಡಿದ್ದು, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತರಿಗೆ ದಾಖಲೆಗಳ ಸಮೇತ ದೂರು ನೀಡಿದರು.
ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ನಲ್ಲಿರುವ ರಾಕ್ ಲೈನ್ ಮಾಲ್ ನಿಂದ ತೆರಿಗೆ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. 2012-13ರಿಂದ ಪಿಐಡಿ ನಂಬರ್ ಬದಲಾವಣೆ ಮಾಡಿ ತಪ್ಪು ಮಾಹಿತಿ ನೀಡುವ ಮೂಲಕ ತೆರಿಗೆ ವಂಚಿಸಿದ್ದಾರೆ ಎಂದು ಅವರು ಆರೋಪಿಸಿದರು.
ಜಾಲಹಳ್ಳಿ ಕ್ರಾಸ್ ಬಳಿ ಇರುವ ರಾಕ್ ಲೈನ್ ಮಾಲ್ ನ ವಿಸ್ತೀರ್ಣ 1,22,743 ಚದರ ಅಡಿ ಇದ್ದು, 48,500 ಚದರ ಅಡಿ ಇದೆ ಎಂದು ತಪ್ಪು ಮಾಹಿತಿ ನೀಡಿ್ದಾರೆ. ಚದರ ಅಡಿ ವಿಸ್ತೀರ್ಣ ಕುರಿತ ಪಿಐಡಿ ನಂಬರ್ ಬದಲಾವಣೆ ಮಾಡಿ ಕಳೆದ 5 ವರ್ಷದಿಂದ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಹೇಳಿದರು.
48,509 ಚದರ ಅಡಿಗೆ ವಾರ್ಷಿಕ ಕೇಲವ 3,78,016 ರೂ. ಮಾತ್ರ ರಾಕ್ ಲೈನ್ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಉಳಿದ 74,243 ಚದರ ಅಡಿಗೆ ಲೆಕ್ಕ ತೋರಿಸದೇ ಕೋಟ್ಯಂತರ ರೂಪಾಯಿ ತೆರಿಗೆ ಪಾವತಿಸದೇ ವಂಚಿಸಿದ್ದಾರೆ. ಇದರಿಂದ ಬೆಂಗಳೂರಿನ ಅಗ್ರ 100 ತೆರಿಗೆ ವಂಚಕರ ಪಟ್ಟಿಯಲ್ಲಿ ಕೂಡ ಹೆಸರು ನಾಪತ್ತೆಯಾಗಿದೆ ಎಂದು ರಮೇಶ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ