ಕರ್ನಾಟಕದ ಪಾಲು ಎಷ್ಟು?

ಬುಧವಾರ, 11 ಆಗಸ್ಟ್ 2021 (07:27 IST)
ನವದೆಹಲಿ, ಆ. 11: ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ರಾಜ್ಯಗಳಿಗೆ ತೆರಿಗೆ ಹಂಚಿಕೆ ಮಾಡಿದ ನಂತರದ ಆದಾಯ ಕೊರತೆ (ಪೋಸ್ಟ್ ಡಿವಲ್ಯೂಷನ್ ರೆವೆನ್ಯೂ ಡಿಫಿಸಿಟ್ – ಪಿಡಿಆರ್ಡಿ) ಅನುದಾನದ 5ನೇ ಮಾಸಿಕ ಕಂತಿನ ಭಾಗವಾಗಿ 9,871 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

ಈ ಕಂತು ಬಿಡುಗಡೆ ಮಾಡುವುದರೊಂದಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 49,355 ಕೋಟಿ ರೂಪಾಯಿ ತೆರಿಗೆ ನಂತರದ ಆದಾಯ ಕೊರತೆ ಅನುದಾನವನ್ನು (ಪಿಡಿಆರ್ಡಿ) ಅರ್ಹ ರಾಜ್ಯಗಳಿಗೆ ಬಿಡುಗಡೆ ಮಾಡಿದಂತಾಗಿದೆ.
ತೆರಿಗೆ ವರ್ಗಾವಣೆ ಮಾಡಿದ ನಂತರದ ಆದಾಯ ಕೊರತೆ ಅನುದಾನವನ್ನು ಸಂವಿಧಾನದ ಅನುಚ್ಛೇದ 275ರ ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ತೆರಿಗೆ ವರ್ಗಾವಣೆ ನಂತರ ರಾಜ್ಯಗಳ ಆದಾಯ ಖೋತಾವನ್ನು ತುಂಬಲು ಹದಿನೈದನೇ ಹಣಕಾಸು ಆಯೋಗದ ಶಿಫಾರಸುಗಳ ಅನುಸಾರ ಮಾಸಿಕ ಕಂತುಗಳಲ್ಲಿ ಅನುದಾನಗಳನ್ನು ಬಿಡುಗಡೆ ಮಾಡಲಾಗುತ್ತದೆ. ಹಣಕಾಸು ಆಯೋಗವು 2021-22ರ ಅವಧಿಯಲ್ಲಿ 17 ರಾಜ್ಯಗಳಿಗೆ ಪಿಡಿಆರ್ಡಿ ಅನುದಾನವನ್ನು ಶಿಫಾರಸು ಮಾಡಿದೆ.
ಈ ಅನುದಾನವನ್ನು ಸ್ವೀಕರಿಸಲು ರಾಜ್ಯಗಳ ಅರ್ಹತೆ ಮತ್ತು ಅನುದಾನದ ಪ್ರಮಾಣವನ್ನು ಆಯೋಗವು ಆದಾಯದ ಮೌಲ್ಯ ಮಾಪನ ಮತ್ತು ರಾಜ್ಯದ ಖರ್ಚಿನ ನಡುವಿನ ಅಂತರವನ್ನು ಆಧರಿಸಿ ನಿರ್ಧರಿಸುತ್ತದೆ. 2021-22ನೇ ಆರ್ಥಿಕ ವರ್ಷಕ್ಕೆ ತೆರಿಗೆ ಹಂಚಿಕೆ ಮೌಲ್ಯ ಮಾಪನವನ್ನು ಆಯೋಗವು ಗಣನೆಗೆ ತೆಗೆದುಕೊಂಡಿದೆ. ಹದಿನೈದನೇ ಹಣಕಾಸು ಆಯೋಗವು 2021-22ರ ಆರ್ಥಿಕ ವರ್ಷದಲ್ಲಿ 17 ರಾಜ್ಯಗಳಿಗೆ ಒಟ್ಟು 1,18,452 ಕೋಟಿ ರೂಪಾಯಿಗಳ ತೆರಿಗೆ ಹಂಚಿಕೆ ಮಾಡಿದ ನಂತರದ ಆದಾಯ ಕೊರತೆ ಅನುದಾನವನ್ನು ಶಿಫಾರಸು ಮಾಡಿದೆ. ಇದರಲ್ಲಿ ಈವರೆಗೆ 49,355  ಕೋಟಿ ರೂಪಾಯಿ (41.67%) ಹಣ ಬಿಡುಗಡೆಯಾಗಿದೆ.
ಹದಿನೈದನೇ ಹಣಕಾಸು ಆಯೋಗವು ಪಿಡಿಆರ್ಡಿ ಅನುದಾನಕ್ಕೆ ಶಿಫಾರಸು ಮಾಡಿದ ರಾಜ್ಯಗಳೆಂದರೆ ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ. ಈ ರಾಜ್ಯಗಳಿಗೆ ಈ ತಿಂಗಳು ಬಿಡುಗಡೆಯಾದ ಅನುದಾನದ ವಿವರಗಳು ಮತ್ತು 2021-22ರಲ್ಲಿ ರಾಜ್ಯಗಳಿಗೆ ಬಿಡುಗಡೆಯಾದ ಪಿಡಿಆರ್ಡಿ ಅನುದಾನದ ಒಟ್ಟು ಮೊತ್ತದ ವಿವರಗಳು ಈ ಕೆಳಕಂಡಂತಿವೆ.
ರಾಜ್ಯಗಳು         
    ಈ ತಿಂಗಳ ಹಣ      ಒಟ್ಟು
1.            ಆಂಧ್ರ ಪ್ರದೇಶ            1438.08       7190.42
2.            ಅಸ್ಸಾಂ                         531.33.      2656.67
3.            ಹರಿಯಾಣ                     11.00.           55.00
4.            ಹಿಮಾಚಲ ಪ್ರದೇಶ.       854.08.      4270.42
5.            ಕರ್ನಾಟಕ.                    135.92.        679.58
6.            ಕೇರಳ.                       1657.58.      8287.92
7.            ಮಣಿಪುರ.                    210.33.      1051.67
8.            ಮೇಘಾಲಯ.               106.58.        532.92
9.            ಮಿಜೋರಾಂ                 149.17.        745.83
10.          ನಾಗಾಲ್ಯಾಂಡ್               379.75.      1898.75
11.          ಪಂಜಾಬ್                      840.08.      4200.42
12.          ರಾಜಸ್ಥಾನ.                    823.17.      4115.83
13.          ಸಿಕ್ಕಿಂ                               56.50.        282.50
14.          ತಮಿಳುನಾಡು                183.67.        918.33
15.          ತ್ರಿಪುರಾ                         378.83.      1894.17
16.          ಉತ್ತರಾಖಂಡ.              647.67.       3238.33
17.          ಪಶ್ಚಿಮ ಬಂಗಾಳ.        1467.25.      7336.25

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ