ರೌಡಿಶೀಟರ್ ಬಬ್ಲಿ ಕೊಲೆ‌ ಪ್ರಕರಣ

ಮಂಗಳವಾರ, 28 ಸೆಪ್ಟಂಬರ್ 2021 (21:30 IST)
naga
ಬೆಂಗಳೂರು: ಬ್ಯಾಂಕ್​ಗೆ ನುಗ್ಗಿ ರೌಡಿಶೀಟರ್ ಬಬ್ಲಿ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಒಂಬತ್ತು ಮಂದಿ ಆರೋಪಿಗಳನ್ನು ನಗರದ ಕೋರಮಂಗಲ ಪೊಲೀಸರು ಜುಲೈ 27 ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಮುಂದುವರೆದು ವಿಲ್ಸನ್‌ ಗಾರ್ಡನ್ ನಾಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
 
ಕಲ್ಬುರ್ಗಿ ಜೈಲಿನಿಂದ ನಾಗನನ್ನು ಬಾಡಿ ವಾರೆಂಟ್ ಮೇರೆಗೆ ಬೆಂಗಳೂರಿಗೆ ಕರೆತಂದಿರುವ ಪೋಲೀಸರು
ಬಬ್ಲಿ ಮರ್ಡರ್ ಕೇಸ್ ನಲ್ಲಿ ನಾಗನ ಕೈವಾಡ ಶಂಕೆ ವ್ಯಕ್ತಪಡಿಸಿದ್ದಾರೆ. ಜೈಲಿನಲ್ಲೇ ಇದ್ದು ಕೊಂಡು ಬಬ್ಲಿ ವಿಲ್ಸನ್ ಗಾರ್ಡನ್ ನಾಗ ಮರ್ಡರ್ ಮಾಡಿಸಿದ್ದಾನೆ ಎನ್ನುವುದಕ್ಕೆ ಪೊಲೀಸರು ಹಲವು ಸಾಕ್ಷಿಗಳನ್ನು ಸಹ ಕಲೆ ಹಾಕಿದ್ದಾರೆ. ಹೆಚ್ಚಿನ ವಿಚಾರಣೆಗೆ ನಾಗನನ್ನು ಕರೆತಂದಿದ್ದೇವ ಎಂದು ಪೊಲೀಸರು ತಿಳಿಸಿದ್ದಾರೆ.
 
ಈಗಾಗಲೇ 9 ಮಂದಿಯ ಬಂಧನ: 
 
ಆಡುಗೋಡಿ ಪೊಲೀಸ್ ಠಾಣೆಯ ರೌಡಿಶೀಟರ್ ಜೊಸೆಫ್ ಆಲಿಯಾಸ್ ಬಬ್ಲಿಯನ್ನು ಜುಲೈ 19 ರಂದು ಕೋರಮಂಗಲದ ಯೂನಿಯನ್ ಬ್ಯಾಂಕ್​ಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಆರೋಪಿಗಳು ಹತ್ಯೆಗೈದಿದ್ದರು‌. ಈ ಸಂಬಂಧ ರವಿ ಹಾಗೂ ಪ್ರದೀಪ್ ಎಂಬುವರ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಜುಲೈ 27 ರಂದು ಬಂಧಿಸಿದ್ದರು.‌
 
ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಗಣೇಶ್,‌ ಅಲ್ಫಾನ್, ಪ್ರವೀಣ್, ಪಲ್ಲಾರವಿ, ಸೋಮಶೇಖರ್, ಸಾಲೊಮಾನ್ ಹಾಗೂ ಉದಯ್ ಕುಮಾರ್ ಎಂಬುವರು ಸೇರಿದಂತೆ‌‌ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು
 
 
ಡೆಡ್ಲಿ ಮರ್ಡರ್: 
 
ಕಳೆದ ಜುಲೈ 19 ರಂದುನಗರದ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಮಟ ಮಟ ಮಧ್ಯಾಹ್ನ ಮಾರಕಾಸ್ತ್ರಗಳಿಂದ ರೌಡಿಶೀಟರ್ ಬಬ್ಲಿಯ ಬರ್ಬರ ಹತ್ಯೆಯಾಗಿತ್ತು. ಮಧ್ಯಾಹ್ನ 1:30ರ ಸುಮಾರಿಗೆ ತನ್ನ ಹೆಂಡತಿಯೊಂದಿಗೆ ಬ್ಯಾಂಕ್​​ಗೆ ಬಂದಿದ್ದ ರೌಡಿಶೀಟರ್ ಬಬ್ಲಿಯನ್ನು ಬ್ಯಾಂಕ್ ಒಳಗೆ ಹೋದ ಕೂಡಲೇ ಐದಾರು ಮಂದಿ ದುಷ್ಕರ್ಮಿಗಳು ಹಿಂದಿನಿಂದ ಬಂದು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಮತಾಂತರ ಮಾಡುವುದನ್ನೇ ಬಬ್ಲಿ ದಂಧೆ ಮಾಡಿಕೊಂಡಿದ್ದ. ಒಂದು ಮತಾಂತರಕ್ಕೆ 3 ಲಕ್ಷ ಹಣ ಪಡೆಯುತ್ತಿದ್ದ. ರಾಜೇಂದ್ರ ಸ್ಲಂನಲ್ಲಿ ಮತಾಂತರಕ್ಕೆಂದೇ ಬಬ್ಲಿ ಆಫೀಸ್ ತೆರೆದಿದ್ದ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ