ಪೊಲೀಸರು ಬಚ್ಚಿಟ್ಟಿದ್ದ 10,000 ಕೋಟಿ ರೂ. ಹಣ ನನಗೆ ತೋರಿಸಿದ್ದರು: ನಾಗ

ಶನಿವಾರ, 22 ಏಪ್ರಿಲ್ 2017 (15:42 IST)
ಪೊಲೀಸರ ಕೈಗೆ ಸಿಗದೆ ಅಜ್ಷಾತವಾಗಿರುವ ರೌಡಿ ನಾಗ ಅಲ್ಲಿಂದಲೇ ಸ್ಪೊಟಕ ಸುದ್ದಿಗಳನ್ನ ಬಿಚ್ಚಿಡುತ್ತಿದ್ದಾರೆ. ಯಶವಂತಪುರದ ಮನೆ, ಲಾಡ್ಜ್`ವೊಂದರಲ್ಲೇ ಬ್ಲ್ಯಾಕ್ ಅಂಡ್ ವೈಟ್ ದಂಧೆ ನಡೆಸುತ್ತಿದ್ದರು. ಐಪಿಎಸ್ ಅಧಿಕಾರಿಗಳೂ ನಾಗನ ಜೊತೆ ಸೇರಿ ಇಲ್ಲಿ ದಂಧೆ ನಡೆಸುತ್ತಿದ್ದರಂತೆ. ಖಾಸಗಿ ಚಾನಲ್ ಜೊತೆ ಫೋನ್ ಮೂಲಕ ಮಾತನಾಡಿರುವ ನಾಗ ಈ ಸ್ಫೋಟಕ ಸುದ್ದಿಗಳನ್ನ ಬಿಚ್ಚಿಟ್ಟಿದ್ದಾನೆ.

ಇಷ್ಟೇ ಅಲ್ಲ, ಐಪಿಎಸ್ ಅಧಿಕಾರಿಗಳು ಮನೆಯೊಂದರಲ್ಲಿ 10,000 ಕೋಟಿ ರೂ. ಬಚ್ಚಿಟ್ಟಿದ್ದರು. ನನ್ನನ್ನ ಕರೆದುಕೊಂಡು ಹೋಗಿ ರಾಶಿ ರಾಶೀ ಹಣವನ್ನ ತೋರಿಸಿ ಅದನ್ನ ಬದಲಿಸಿಕೊಡುವಂತೆ ಕೇಳಿದ್ದರು ಎಂದು ಹೇಳಿಕೊಡಿದ್ದಾನೆ.

ನಾನು ಮತ್ತು ಪೊಲಿಸರು ಇದೇ ಲಾಡ್ಜ್`ಗಳಲ್ಲಿ ಸೇರಿ ಹಳೇ ನೋಟು ಬದಲಾವಣೆಯ ಮಾತುಕತೆ ನಡೆಸುತ್ತಿದ್ದೆವು. ರಾತ್ರಿ 12ವರೆಗೂ ಹಣ ಬದಲಾವಣೆಯ ಮಾತುಕತೆ ನಡೆಯುತ್ತಿತ್ತು ಎಂದು ನಾಗ ಹೇಳಿಕೊಂಡಿದ್ಧಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ