ಡಿಎಲ್‌ ಎಫ್‌ ನಿಂದ 34,615 ಕೋಟಿ ವಂಚನೆ: ಬ್ಯಾಂಕಿಂಗ್‌ ಇತಿಹಾಸದಲ್ಲೇ ಅತೀ ದೊಡ್ಡ ಪ್ರಕರಣ!

ಬುಧವಾರ, 22 ಜೂನ್ 2022 (19:52 IST)
ಭಾರತೀಯ ಬ್ಯಾಂಕಿಂಗ್ ಇತಿಹಾಸದಲ್ಲೇ ಅತೀ ದೊಡ್ಡ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಡಿಎಲ್‌ ಎಫ್ ವಿರುದ್ಧ ಸಿಬಿಐ 34,615 ಕೋಟಿ ರೂ. ಎಫ್‌ ಐಆರ್‌ ದಾಖಲಿಸಿದೆ.
ಭಾರತದ ಬ್ಯಾಂಕ್‌ ಗಳಿಗೆ ಅತೀ ದೊಡ್ಡ ಮೊತ್ತದ ವಂಚನೆ ಮಾಡಿದ ನೀರವ್‌ ಮೋದಿಗಿಂತ ಮೂರು ಪಟ್ಟು ಹೆಚ್ಚು ಮೊತ್ತದ ವಂಚನೆ ಪ್ರಕರಣ ಇದಾಗಿದ್ದು, ಡಿಎಲ್ ಎಫ್‌ ಕಂಪನಿಯ ನಿರ್ದೇಶಕರಾದ ಕಪಿಲ್‌, ಧೀರಜ್ ವಧವನ್ ಮತ್ತಿತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಎಫ್‌ ಐಆರ್‌ ಪ್ರಕಾರ ದೇವನ್‌ ಹೌಸಿಂಗ್‌ ಫೈನಾನ್ಸ್‌ ಕಾರ್ಪೊರೇಷನ್‌ ಲಿಮಿಟೆಡ್ (ಡಿಎಚ್‌ ಎಲ್‌ ಎಫ್)‌ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕಪಿಲ್‌ ವಧವನ್‌, ಧೀರಜ್ ವಧವನ್‌, ಉದ್ಯಮಿ ಸುಧಾಕರ್‌ ಶೆಟ್ಟಿ ಮುಂತಾದವರು ಗ್ರಾಹಕರು ಸೇರಿದಂತೆ 17 ಬ್ಯಾಂಕ್‌ ಗಳಿಗೆ ವಂಚಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ