ಕುಡಿಯುವ ನೀರಿಗೆ ಸರ್ಕಾರದಿಂದ ರೂ.350 ಕೋಟಿ ಬಿಡುಗಡೆ

ಬುಧವಾರ, 11 ಜನವರಿ 2017 (12:17 IST)
ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಗಂಭೀರ ಪರಿಸ್ಥಿತಿ ಎದುರಾಗಬಹುದೆಂದು ಅಂದಾಜಿಸಲಾಗಿದೆ. ಕುಡಿಯುವ ನೀರು ಸರಬರಾಜಿಗೆ ಮೊದಲ ಆದ್ಯತೆ ನೀಡಿರುವ ಸರ್ಕಾರ ಇದಕ್ಕೆ ರೂ.350 ಕೋಟಿ ಹಣ ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ತಿಳಿಸಿದ್ದಾರೆ.
 
ಬರ ಅಧ್ಯಯನಕ್ಕೆ ಸಚಿವರ ನಾಲ್ಕು ತಂಡಗಳು ತೆರಳಿದ್ದು, ಅಧ್ಯಯನ ಮುಗಿದಿದೆ. ವರದಿ ಬಂದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದ ಸಚಿವರು, ಬರದಿಂದ ರಾಜ್ಯದಲ್ಲಿ ಸುಮಾರು ಮೂರು ಸಾವಿರ ಕೋಟಿ ರೂ. ನಷ್ಠ ಆಗಿದೆ. ಕೇಂದ್ರದಿಂದ ರೂ. 1754 ಕೋಟಿ ಬಂದಿದ್ದು, ಇನ್ನೂ 900 ಕೋಟಿ ರೂ. ಹಣ ನೀರಿಕ್ಷಿಸಲಾಗಿದೆ ಎಂದ್ದಾರೆ.
 
33ತಾಲೂಕುಗಳ ರಚನೆ: ನಮಗೆ ಬೆಳೆ ಪರಿಹಾರದ ಹಣ ಮೂರು ಸಾವಿರ ಕೋಟಿ ರೂ. ಆಗಿದ್ದು ರೈತರಿಗೆ ನಿಯಮಾವಳಿ ಪ್ರಕಾರ ಒಂದು ಹೆಕ್ಟೇರ್ ಪ್ರದೇಶಕ್ಕೆ ರೂ.6350 ಪರಿಹಾರ ನೀಡಬೇಕಾಗುತ್ತದೆ ಎಂದ ಸಚಿವರು ಮುಂದಿನ ಮಾರ್ಚ್, ಏಪ್ರಿಲ್ ವೇಳೆಗೆ ಬೇಸಿಗೆ ಇನ್ನೂ ಗಂಭೀರವಾಗಲಿದ್ದು ಕುಡಿಯುವ ನೀರು ಪೂರೈಕೆಗಾಗಿಯೇ ನಮಗೆ ರೂ.1500 ಕೋಟಿ ಹಣ ಬೇಕಾಗುತ್ತದೆ. ಸರ್ಕಾರ ಹೊಸ 33 ತಾಲ್ಲೂಕುಗಳ ರಚನೆಗೆ ಚಿಂತನೆ ನಡೆಸಿದ್ದು ಮುಂದಿನ ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ