ರೂ. 7 ಲಕ್ಷ ಮೌಲ್ಯದ ನೆಕ್ಲೇಸ್​ ಕದ್ದ ಮಹಿಳೆ

ಮಂಗಳವಾರ, 29 ನವೆಂಬರ್ 2022 (19:23 IST)
ಉತ್ತರ ಪ್ರದೇಶದ ಗೋರಖ್‌ಪುರದ ಆಭರಣ ಮಳಿಗೆಯೊಂದರಲ್ಲಿ ಮಹಿಳೆಯೊಬ್ಬಳು ರೂ. 7 ಲಕ್ಷದ ನೆಕ್ಲೇಸ್​ ಅನ್ನು ಕದ್ದಿದ್ದಾಳೆ. ಈಕೆ ಆಭರಣವನ್ನು ಕದಿಯುವ ಈ ದೃಶ್ಯ ಆಭರಣ ಮಳಿಗೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಆಗಿದೆ. ಈ ಮಹಿಳೆಯು ಮಾಸ್ಕ್ ಮತ್ತು ಕಪ್ಪುಬಣ್ಣದ ಕೂಲಿಂಗ್​ ಗ್ಲಾಸ್​ ಧರಿಸಿದ್ದಾಳೆ. ನೆಟ್ಟಿಗರು ಈ ವಿಡಿಯೋ ನೋಡಿ ಬೆಚ್ಚಿಬಿದ್ದಿದ್ದಾರೆ. ಈ ಘಟನೆ ನಡೆದಿದ್ದು ನವೆಂಬರ್ 17ರಂದು. ಬಲದೇವ್​ ಪ್ಲಾಝಾದ ಬೇಚೂಲಾಲ್​ ಸರಾಫ್​ ಪ್ರೈವೇಟ್ ಲಿಮಿಟೆಡ್​ ಎಂಬ ಆಭರಣ ಅಂಗಡಿಗೆ ಈ ಮಹಿಳೆ ನೆಕ್ಲೇಸ್​ ಖರೀದಿಸಲು ಹೋಗಿದ್ದಾಳೆ. ಆಭರಣವನ್ನು ಸಮೀಪದಿಂದ ನೋಡುತ್ತಿರುವಂತೆ ಒಂದೆರಡು ಸಲ ನಟಿಸುತ್ತಾಳೆ. ಹೀಗೆ ಮಾಡುತ್ತಲೇ ನೆಕ್ಲೇಸ್​ನ ಬಾಕ್ಸ್​ಗಳನ್ನು ತನ್ನ ತೊಡೆಯ ಮೇಲೆ ಇಟ್ಟುಕೊಳ್ಳುತ್ತಾಳೆ. ನಂತರ ಒಂದನ್ನು ಮಾತ್ರ ಕೌಂಟರಿನ ಮೇಲೆ ಇಡುತ್ತಾಳೆ. ತೊಡೆಯ ಮೇಲೆ ಇಟ್ಟುಕೊಂಡ ಬಾಕ್ಸ್​ ಅನ್ನು ಸೀರೆಯಿಂದ ಮರೆಮಾಚುತ್ತಾಳೆ. ಸಿಸಿಟಿವಿಯಲ್ಲಿ ಸೆರೆಯಾದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹೌಹಾರಿದ್ದಾರೆ. ನಪತ್ತೆ ಯಾಗಿರುವ ಕಳ್ಳಿಯನ್ನ  ಹುಡುಕಡುತ್ತಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ