ಸಿ.ಟಿ.ರವಿಗೆ ಸಂವಿಧಾನದ ತತ್ವ ಅರ್ಥವಾಗುವುದಿಲ್ಲ-ಸಿದ್ದರಾಮಯ್ಯ

ಮಂಗಳವಾರ, 29 ನವೆಂಬರ್ 2022 (19:00 IST)
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೊಲೆ, ಗಲಭೆಗಳಾಗುತ್ತದೆ ಎಂಬ ಸಿ.ಟಿ. ರವಿ ಹೇಳಿಕೆಗೆ ಶಿವಮೊಗ್ಗದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು ಸಿ.ಟಿ. ರವಿ ಮೋಸ್ಟ್  ಕಮ್ಯೂನಲ್ ಫೆಲೋ, ಅವರಿಗೆ ಜಾತ್ಯತೀತ ತತ್ವ ಅರ್ಥವಾಗುವುದಿಲ್ಲ, ಸಂವಿಧಾನದ ತತ್ವ ಅರ್ಥವಾಗುವುದಿಲ್ಲ. ಅಂತಹವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಿನ್ನೆ ಶಿವಮೊಗ್ಗದಲ್ಲಿ ಮಲೆನಾಡು ಜನಾಕ್ರೋಶ ಸಭೆ ಯಶಸ್ವಿಯಾಗಿದೆ. ನಾವು ಅಧಿಕಾರದಲ್ಲಿದ್ದಾಗ ಶರಾವತಿ ಸಂತ್ರಸ್ತರ ಹಿತ ಗಮನದಲ್ಲಿಟ್ಟುಕೊಂಡು 56 ಡಿ ನೋಟಿಫಿಕೇಷನ್ ಹೊರಡಿಸಿದ್ದೇವು. ಮದನ್ ಗೋಪಾಲ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದೇವು. 1950ರಲ್ಲಿ ಶರಾವತಿ ಯೋಜನೆ ಜಾರಿ ಆಗಿದೆ ಹಾಗೂ 1980 ರಲ್ಲಿ ಅರಣ್ಯ ಕಾಯ್ದೆ ಬಂದಿದೆ . ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ನಾವು ಆದೇಶ ಹೊರಡಿಸಿದ್ದೇವೆ. ಆದರೆ ಗಿರೀಶ್ ಆಚಾರ್ ಎಂಬುವರು ಹೈ ಕೋರ್ಟ್​ಗೆ ಹೋದ ಕಾರಣ ಡಿ ನೋಟಿಫಿಕೇಷನ್ ರದ್ದಾಗಿದೆ. ಈಗಿನ ಬಿಜೆಪಿ ಸರ್ಕಾರ ಏನು ಮಾಡಿದೆ. ಯಡಿಯೂರಪ್ಪ, ಬೊಮ್ಮಾಯಿ ಏನು ಮಾಡಿದ್ದಾರೆ. ಬರಿ ರೈತ ನಾಯಕ ಎಂದು ಹೇಳಿಕೊಂಡರೆ ಆಗುವುದಿಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ