ಫಾಸ್ಟ್ ಫುಡ್ ಅಂಗಡಿ ಮುಚ್ಚಿ ಎಂದ ಪೊಲೀಸ್ ಪೇದೆಗೆ ಥಳಿಸಿದ ರೌಡಿಶೀಟರ್
ಶುಕ್ರವಾರ, 25 ಅಕ್ಟೋಬರ್ 2019 (11:48 IST)
ಮೈಸೂರು : ಫಾಸ್ಟ್ ಪುಡ್ ಅಂಗಡಿ ಮುಚ್ಚುವ ವಿಚಾರಕ್ಕೆ ಪೊಲೀಸ್ ಪೇದೆಯನ್ನು ರೌಡಿಶೀಟರ್ ಹಿಗ್ಗಾಮಗ್ಗಾ ಥಳಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಈ ಘಟನೆ ಕಳೆದ ವಾರ ಮೈಸೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರೌಡಿಶೀಟರ್ ಸೋಮಶೇಖರ್ ಅಲಿಯಾಸ್ ಸೋಮ, ಮುಖ್ಯ ಪೇದೆ ಮಂಜುನಾಥ್ ಗೆ ಥಳಿಸಿದ್ದಾರೆ.
ರೌಡಿಶೀಟರ್ ಸಹೋದರಿ ಫಾಸ್ಟ್ ಪುಡ್ ಅಂಗಡಿ ನಡೆಸುತ್ತಿದ್ದು, ತಡರಾತ್ರಿಯವರೆಗೂ ಅಂಗಡಿ ತೆರೆದಿದ್ದ ಕಾರಣ ಅದನ್ನು ಮುಚ್ಚುವಂತೆ ಪೊಲೀಸ್ ಪೇದೆ ಮಂಜುನಾಥ್ ಹೇಳಿದ್ದಾರೆ. ಇದರಿಂದ ಕೋಪಗೊಂಡ ರೌಡಿಶೇಟರ್ ಸೋಮಶೇಖರ್ ಪೊಲೀಸ್ ಪೇದೆಯನ್ನು ಹಿಗ್ಗಾಮಗ್ಗಾ ಥಳಿಸಿದ್ದಾನೆ.