ಇಂದಿನಿಂದ ವಾರದ ಎಲ್ಲಾ ದಿನವೂ ಮೆಟ್ರೋ ಸಂಚಾರ

ಸೋಮವಾರ, 5 ಜುಲೈ 2021 (17:41 IST)
ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಮೆಟ್ರೋ ಸಂಚಾರ ಇಂದಿನಿಂದ ಆರಂಭವಾಗಿದೆ. ಸೋಮವಾರ ದಿಂದ ಶುಕ್ರವಾರದ ವರೆಗೆ ಗರಿಷ್ಠ ಸಮಯದಲ್ಲಿ 5 ನಿಮಿಷದಿಂದ, ಗರಿಷ್ಠ ವಲ್ಲದ ಸಮಯದಲ್ಲಿ 15 ನಿಮಿಷ ಅಂತರದಲ್ಲಿ ಮೆಟ್ರೋ ಸೇವೆ ಆರಂಭವಾಗಿದೆ. ಶನಿವಾರ ಭಾನುವಾರ ಪ್ರಯಾಣಿಕರ ದಟ್ಟನೆಗೆ ಅನುಗುಣವಾಗಿ ಮೆಟ್ರೋ ಓಡಾಟ ನಡೆಸಲಿದೆ. ಅನ್ಲಾಕ್‌ 2.0 ನಲ್ಲಿ 50 ರಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಇಂದಿನಿಂದ 100% ಪ್ರಯಾಣಿಕರಿಗೆ ಅವಕಾಶ ನೀಡಿದೆ. 
 
ಇಂದಿನಿಂದ ಪೂರ್ಣ ಪ್ರಯಾಣದಲ್ಲಿ ಕಂಪನಿ, ಕಾರ್ಖಾನೆ, ಸರ್ಕಾರಿ ಕಚೇರಿಗಳು ಆರಂಭವಾಗುವ ಹಿನ್ನೆಲೆಯಲ್ಲಿ, ಜನ ಸಂಚಾರ ಹೆಚ್ಚಾಗುವ ನಿರೀಕ್ಷೆ ಇದೆ. ಜೊತೆಗೆ ಬಸ್ ನಿಲ್ದಾಣದ ಆವರಣದಲ್ಲೇ ಕೊರೋನಾ ಟೆಸ್ಟ್ ಮಾಡಲಾಗುತ್ತಿದೆ. 
 
 
ಉಳಿದಂತೆ ಏನೇನಿವೆ ?  
 
ಹೋಟೆಲ್ ಗಳಲ್ಲಿ ರಾತ್ರಿ 9 ಗಂಟೆವರೆಗೂ ಕುಳಿತು ಊಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಅಂಗಡಿ ಮುಂಗಟ್ಟುಗಳು ರಾತ್ರಿ 9 ಗಂಟೆವರೆಗೂ ಓಪನ್ ಮಾಡಿ ವ್ಯಾಪಾರ ವಹಿವಾಟು ನೆಡೆಸುತ್ತಿವೆ. ಇನ್ನು ಶೇಕಡಾ100ರಷ್ಟು ಸಿಬ್ಬಂದಿ ಬಳಸಿ ಸರ್ಕಾರಿ, ಖಾಸಗಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಇದೆ. ಆದರೆ ದೇವಸ್ಥಾನದಲ್ಲಿ ಜನರಿಗೆ ಪ್ರಸಾದ ಹಂಚಿಕೆ, ಪೂಜೆಗೆ ಅವಕಾಶ ವಿಲ್ಲ. 
 
ಮದುವೆ ಸಮಾರಂಭಕ್ಕೆ ಇಷ್ಟು ದಿನ 40 ಜನರಿಗಷ್ಟೇ ಅವಕಾಶ ಇತ್ತು. ಆದರೆ ಇಂದಿನಿಂದ ಮದುವೆಗಳಲ್ಲಿ 100 ಜನ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಅಂತ್ಯ ಸಂಸ್ಕಾರದಲ್ಲಿ 20 ಜನರಿಗೆ ಭಾಗವಹಿಸಲು ಪರ್ಮಿಷನ್ ಇದೆ. ಇನ್ನು ಈಜುಕೊಳ ಓಪನ್ ಮಾಡಲಾಗಿದ್ದು  ಕ್ರೀಡಾಪಟುಗಳಿಗೆ ಮಾತ್ರ ಪ್ರ್ಯಾಕ್ಟಿಸ್ ಮಾಡುತ್ತಿದ್ದಾರೆ. ಜೊತೆಗೆ ಕ್ರೀಡಾ ಸಂಕೀರ್ಣಗಳು ತೆರೆದಿದ್ದು, ಅಲ್ಲಿಯೂ ಕ್ರೀಡಾಪಟುಗಳು ಮಾತ್ರ ಅಭ್ಯಾಸ ಮಾಡುತ್ತಿದ್ದಾರೆ.
 
ರಾತ್ರಿ 9ರಿಂದ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂಗೆ ಗುಡ್ಬೈ
 
ವೀಕೆಂಡ್ ಕರ್ಫ್ಯೂ ಕ್ಯಾನ್ಸಲ್ ಎನ್ನುವ ಆತಂಕ ವೀಕೆಂಡ್ ಮಸ್ತಿ ಪ್ರಿಯರಿಗೆ ಇತ್ತು. ಅಂತವರಿಗೆ ಸರ್ಕಾರ ರಿಲೀಫ್ ಕೊಟ್ಟಿದೆ, ಈ ವಾರದಿಂದಲೇ ವೀಕೆಂಡ್ ಕರ್ಫ್ಯೂ ಇರುವುದಿಲ್ಲ. ಆದರೆ  ನೈಟ್ ಕರ್ಫ್ಯೂ ಇರಲಿದ್ದು, ನೈಟ್ ಕರ್ಫ್ಯೂ ಅವಧಿಯನ್ನ ಕಡಿಮೆ ಮಾಡಲಾಗಿದೆ. ಅಂದರೆ ಇಂದಿನಿಂದ ಸಂಜೆ 7ರ ಬದಲಿಗೆ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ಕರ್ಫ್ಯೂ ಇರಲಿದೆ.
 
ದೇಗುಲ ಓಪನ್, ಭಕ್ತರಿಗೆ ದೇವರ ದರ್ಶನ: 
 
ಮಂದಿರ, ಚರ್ಚ್ ಮಸೀದಿಗಳಿಗೆ ತೆರಳಲಾಗದೆ ಮನಸ್ಸಿನಲ್ಲೇ ಪ್ರಾರ್ಥನೆ ಮಾಡುತ್ತಿದ್ದ  ಭಕ್ತರಿಗೆ ಕೊನೆಗೂ ಗುಡ್‌ ನ್ಯೂಸ್ ಸಿಕ್ಕಿದೆ. ಹೀಗಾಗಿ ರಾಜ್ಯದ ಎಲ್ಲಾ ಪ್ರಾರ್ಥನಾ ಮಂದಿರಗಳಲ್ಲಿ ಇಂದಿನಿಂದ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ಬನಶಂಕರಿ, ಕಾಡು ಮಲ್ಲೇಶ್ವರ, ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೇವರ ದರ್ಶನ ಜನರು ಪಡೆಯುತ್ತಿದ್ದಾರೆ.
 
ಒಟ್ಟಿನಲ್ಲಿ ಎರಡು ತಿಂಗಳ ಬಳಿಕ ಕರುನಾಡು ಕಂಪ್ಲೀಟ್  ಓಪನ್ ಆಗ್ತಿದೆ. ಅನ್ಲಾಕ್ ಇದೆ ಅಂತ ಬೇಕಾಬಿಟ್ಟಿ ಓಡಾಡುತ್ತಾ , ಕೊವಿಡ್ ರೂಲ್ಸ್ ಬ್ರೇಕ್ ಮಾಡಿ ಸಂಕಷ್ಟಕ ಒಳಗಾಗಬೇಕಾದ ಆತಂಕವೂ ಇದೆ. ಅನ್‌ಲಾಕ್‌ನಲ್ಲೂ ಕಟ್ಟು ನಿಟ್ಟಿನ ರೂಲ್ಸ್‌ಗಳಿವೆ. ಈ ರೂಲ್ಸ್‌ಗಳನ್ನು ಫಾಲೋ ಮಾಡಲೇ ಬೇಕು. ರೂಲ್ಸ್ ಫಾಲೋ ಮಾಡದೆ ಮತ್ತೆ ಕೊರೊನಾಗೆ ಆಹ್ವಾನ ಕೊಡುತ್ತಿರುವ ಆತಂಕವೂ ಎದುರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ