ನಮೋ ಭಾರತ್ ಸಂಘಟನೆಯಿಂದ ರನ್ ಫಾರ್ ಮೋದಿ
ನಮೋ ಭಾರತ್ ಸಂಘಟನೆಯಿಂದ ರನ್ ಫಾರ್ ಮೋದಿ ಜಾಥಾ ಆಯೋಜನೆ ಮಾಡಲಾಗಿತ್ತು.
ಮತ್ತೊಮ್ಮೆ ನರೇಂದ್ರ ಮೋದಿ ಎಂಬ ಘೋಷಣೆಯೊಂದಿಗೆ ರನ್ ಫಾರ್ ಮೋದಿ ಜಾಥಾ ಸಂಘಟಿಸಲಾಗಿತ್ತು.
ಮೈಸೂರು ನಗರದ ಚಲುವಾಂಬ ಪಾರ್ಕ್ ನಿಂದ ಹೊರಟ ಜಾಥದಲ್ಲಿ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಪಾಲ್ಗೊಂಡಿದ್ದರು.
ರನ್ ಫಾರ್ ಮೋದಿ ಜಾಥಕ್ಕೆ ನಮೋ ಭಾರತ್ ರಾಜ್ಯ ಸಂಚಾಲಕ ದಿನೇಶ್ ಚಾಲನೆ ನೀಡಿದರು. ಈ ವಾಕ್ ಥಾನ್ ನಲ್ಲಿ ಸಾವಿರಾರು ಮೋದಿ ಅಭಿಮಾನಿಗಳು ಭಾಗಿಯಾಗಿದ್ದರು. ರಸ್ತೆ ಉದ್ದಕ್ಕೂ ಪ್ರಧಾನಿಗೆ ಜೈಕಾರ ಹಾಕಿ ನಡೆದ ಅಭಿಮಾನಿಗಳು ಗಮನ ಸೆಳೆದರು.