`ಸತ್ಯ ಮೇವ ಜಯತೆ’ ಎಂದ ರೂಪಾ

ಶುಕ್ರವಾರ, 24 ಫೆಬ್ರವರಿ 2023 (16:52 IST)
ಬೆಂಗಳೂರು : ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ನಡುವಿನ ಜಟಾಪಟಿಗೆ ಸಿಟಿ ಸಿವಿಲ್ ಕೋರ್ಟ್ ಬ್ರೇಕ್ ಹಾಕಿತ್ತು.

ಡಿ. ರೂಪಾ ವಿರುದ್ಧ ಮಾಡಿದ್ದ ಆರೋಪಗಳನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಕೋರ್ಟ್ ಮೆಟ್ಟಿಲೇರಿದ್ದರು. ವಿನಾಕಾರಣ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರೋ ರೂಪಾ ಅವರು ಮಾತನಾಡದಂತೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ವೇಳೆ ರೋಹಿಣಿ ಸಿಂಧೂರಿ ಅವರ ವಾದ ಆಲಿಸಿದ ಕೋರ್ಟ್ ರೋಹಿಣಿ ಸಿಂಧೂರಿ ಅವರ ವಿರುದ್ಧ ರೂಪಾ ಮಾತನಾಡದಂತೆ ತಡೆಯಾಜ್ಞೆ ನೀಡಿತ್ತು.

ರೂಪಾ ಫೇಸ್ಬುಕ್ ವಾಲ್ನಲ್ಲಿ ತಮ್ಮ ವಾದ ಕೇಳಲು ಅವಕಾಶ ನೀಡಿದ ಕೋರ್ಟ್ಗೆ ನಾನು ಅಬಾರಿಯಾಗಿದ್ದೇನೆ. ಜೊತೆಗೆ ನನ್ನ ಬೆಂಬಲಕ್ಕೆ ನಿಂತವರಿಗೆ ನಾನು ಧನ್ಯವಾದಗಳನ್ನ ತಿಳಿಸಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ