ವಂಚನೆ: ಪೊಲೀಸ್‌ಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಸಾಧ್ವಿ ಜಯಶ್ರೀ ಗಿರಿ ಬಂಧನ

ಬುಧವಾರ, 21 ಜೂನ್ 2017 (13:14 IST)
ವಂಚನೆ ಆರೋಪಕ್ಕೆ ಗುರಿಯಾಗಿ ಪೊಲೀಸ್ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಸಾಧ್ವಿ ಜಯಶ್ರೀ ಗಿರಿಯನ್ನು ಮತ್ತೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
ಕಳೆದ ಜೂನ್ 14 ರಂದು ನಗರದ ಮಾಲ್‌ವೊಂದರಲ್ಲಿ ಸಾಧ್ವಿ ಜಯಶ್ರೀಯನ್ನು ಪೊಲೀಸರು ಬಂಧಿಸಲು ಆಗಮಿಸಿದ್ದಾಗ ಯಾವುದೊ ನೆಪವೊಡ್ಡಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಳು.    
 
ರಾಜಸ್ಥಾನದ ಉದಯಪುರ ನಗರದ ಬಳಿಯಿರುವ ಟೋಲ್‌ಬೂಥ್‌ನಲ್ಲಿ ಸಾಧ್ವಿ ಜಯಶ್ರೀ ಗಿರಿಯನ್ನು ಬಂಧಿಸಲಾಗಿದ್ದು ಅಹ್ಮದಾಬಾದ್‌ಗೆ ಕರೆದುಕೊಂಡು ಬರಲಾಗುತ್ತಿದೆ ಎಂದು ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಬನಸ್ಕಂದ್ ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಮುಕ್ತೇಶ್ವರ್ ಮಹಾದೇವ್ ಮಠದ ಮುಖ್ಯಸ್ಥೆಯಾಗಿದ್ದ ಸಾಧ್ವಿ ಜಯಶ್ರೀ, ವಂಚನೆಯ ಆರೋಪದ ಮೇಲೆ ಬಂಧಿತರಾಗಿದ್ದರು. ನಂತರ ಅವರನ್ನು ಸಬರಮತಿ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿತ್ತು. ಆದರೆ, 10 ದಿನಗಳ ನಂತರ ಅನಾರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಜಾಮೀನು ನೀಡಲಾಗಿತ್ತು 
 
ಜಾಮೀನು ಪಡೆದ ನಂತರ ಸಾಧ್ವಿ ಜಯಶ್ರೀ ಪರಾರಿಯಾಗಿದ್ದಳು, ಇದೀಗ ಮತ್ತೆ ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದಾಳೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ