ವ್ಯಾಕ್ಸಿನ್ ಗೆ ಹೆಚ್ಚಾಯ್ತು ಬೇಡಿಕೆ

ಶನಿವಾರ, 11 ಜೂನ್ 2022 (19:34 IST)
ಕೋವಿಡ್ ಗೆ ರಾಮಬಾಣ ಅಂದ್ರೆ ಅದು ವ್ಯಾಕ್ಸಿನ್ . ಇತ್ತೀಚೆಗೆ ಕೋವಿಡ್ ಕೇಸಸ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಹೀಗಾಗಿ ಎಚ್ಚೇತ್ತ ಜನರು ವ್ಯಾಕ್ಸಿನ್ ಸೆಂಟರ್ ಕಡೆ ಮುಖಮಾಡ್ತಿದ್ದಾರೆ.ಹತ್ತಿರದ ವ್ಯಾಕ್ಸಿನ್ ಸೆಂಟರ್ ನಲ್ಲಿ ಕ್ಯೂ ನಲ್ಲಿ ನಿಂತು ಜನ ವ್ಯಾಕ್ಸಿನ್ ಹಾಕಿಸಿಕೊಳ್ತಿದ್ದಾರೆ.ಕೊರೊನಾ ಕೇಸಸ್ ಹೆಚ್ಚಾಗ್ತಿದಂತೆ ವ್ಯಾಕ್ಸಿನ್ ಗೆ ಬೇಡಿಕೆ ಶುರುವಾಗಿದೆ. ಕೋವಿಡ್ ನಿಯಂತ್ರಿಸುವುದಕ್ಕೆ ಇರುವ ಒಂದೇ ಒಂದು ಮಾರ್ಗ ಅಂದ್ರೆ ಅದು ಸಂಜೀವಿನಿ ಒಂದೇ. ಹಾಗಾಗಿ ಇಷ್ಟು ದಿನ ವ್ಯಾಕ್ಸಿನ್ ಹಾಕಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ ಜನರು ಈಗ ವ್ಯಾಕ್ಸಿನ್ ಹಾಕಿಸಿಕೊಳ್ಳಲು ವ್ಯಾಕ್ಸಿನ್ ಸೆಂಟರ್ ಕಡೆ ಆಗಮಿಸ್ತಿದ್ದಾರೆ. ಇನ್ನು ಜನರಿಲ್ಲದೇ ಬಿಕೋ ಎನ್ನುತ್ತಿದ್ದ ವ್ಯಾಕ್ಸಿನ್ ಸೆಂಟರ್ ಈಗ ಜನರಿಂದ ತುಂಬಿತ್ತು. ಈ ಹಿಂದೆ ವ್ಯಾಕ್ಸಿನ್ ಹಾಕಿಸಿಕೊಳ್ಳದ ಜನರು ಭಯದಿಂದ ವ್ಯಾಕ್ಸಿನ್ ಹಾಕಿಸಿಕೊಳ್ಳಲು ವ್ಯಾಕ್ಸಿನ್ ಸೆಂಟರ್ ನಲ್ಲಿ ಮುಗಿಬಿದ್ದಿದ್ರು.
ಸರ್ಕಾರ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂತಾ ಹೇಳಿ ಹೇಳಿ ಸಕ್ಕಾಗಿದೆ. ಆದ್ರೆ ಇತ್ತಾ ಕೆಲ ಜನರು ಸರ್ಕಾರದ ಆದೇಶವನ್ನ ಪಾಲನೆ ಮಾಡಿಲ್ಲ. ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ. ಆದ್ರೆ ಈಗ ಎಲ್ಲಾ ಕಡೆ ವ್ಯಾಕ್ಸಿನ್ ಸರ್ಟಿಪಿಕೇಟ್ ಕಡ್ಡಾಯ ಅಂದಕೂಡಲೇ ಜನರು ವ್ಯಾಕ್ಸಿನ್ ಹಾಕಿಸಿಕೊಳ್ತಿದ್ದಾರೆ. ಇನ್ನು ಸರ್ಕಾರಿ ಆಸ್ಪತ್ರೆಯಾದ ಕೆಸಿ ಜನರಲ್ ನಲ್ಲಿ ಈಗಾಗಲೇ ಬೂಸ್ಟರ್ ಡೋಸ್ ಉಚಿತವಾಗಿ ಕೋಡ್ತಿದ್ದಾರೆ. ಆದ್ರೆ ಬಹುತೇಕ ವ್ಯಾಕ್ಸಿನ್ ಸೆಂಟರ್ ನಲ್ಲಿ ಬೂಸ್ಟರ್ ಡೋಸ್ ಸಿಗ್ತಿಲ್ಲ. ಹೀಗಾಗಿ ಎಷ್ಟೋ ಜನರು  ಖಾಸಗಿ ಆಸ್ಪತ್ರೆಗಳಲ್ಲಿ ಹಣ ಕೊಟ್ಟು ವ್ಯಾಕ್ಸಿನ್ ಹಾಕಿಸಿಕೊಳ್ತಿದ್ದಾರೆ. ಎಷ್ಟೋ ಬಡಜನರಿಗೆ ಖಾಸಗಿ ಆಸ್ಪತ್ರೆಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಆಗಲ್ಲ. ಹಾಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಕೊಡಿ ಎಂದು ಜನರು ಒತ್ತಾಯ ಮಾಡ್ತಿದ್ದಾರೆ.
ಇಷ್ಟು ದಿನ ಕೋವಿಡ್ ಮರೆತಿದ್ದ ಜನರು. ಈಗ ಸರ್ಕಾರದ ಆದೇಶದಿಂದ ಆತಂಕಕ್ಕೆ ಒಳಗಾಗಿದ್ದಾರೆ. ಹಾಗಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಸ್ವತಃ ಸ್ವಯಂ ಪ್ರೇರಿತವಾಗಿ ಜನರು ಮುಂದೆ ಬರ್ತಿದ್ದಾರೆ. ಇನ್ನು ಕೆಸಿ ಜನರಲ್ ಆಸ್ಪತ್ರೆಯ ವ್ಯಾಕ್ಸಿನ್ ಸೆಂಟರ್ ಮುಂಭಾಗ ಅಂತೂ ಜನರು  ವ್ಯಾಕ್ಸಿನ್ ಹಾಕಿಸಿಕೊಳ್ಳಲು ಕ್ಯೂ ನಲ್ಲಿ ನಿಂತಿದ್ರು. ಸರದಿ ಸಾಲಿನಲ್ಲಿ ನಿಂತು ಒಬಬ್ಬರಂತೆ ವ್ಯಾಕ್ಸಿನ್ ಹಾಕಿಸಿಕೊಳ್ತಿದ್ರು. ಜೊತೆಗೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಲು ವಯೋವೃದ್ಧರು ಕೂಡ ಆಗಮಿಸಿದ್ರು. ಪ್ರತಿಯೊಬ್ಬರು ಮಕ್ಕಳನ್ನಾದೇ ವ್ಯಾಕ್ಸಿನ್ ಹಾಕಿಸಿಕೊಳ್ಳಲು ವ್ಯಾಕ್ಸಿನ್ ಸೆಂಟರ್ ನಲ್ಲಿ ಮುಗಿಬಿದ್ದಿದ್ರು.ಸಂಜೀವಿನಿಗಾಗಿ ಒಂದು ಕಾಲದಲ್ಲಿಜನರು ಪರದಾಟ ನಡೆಸಿದ್ರು. ಆದ್ರೆ ಈಗ ಸಂಜೀವಿನಿ ಸಿಗ್ತಿದೆ . ಆದ್ರೆ ಜನರು ಹಾಕಿಸಿಕೊಳ್ಳುವ ಮನಸ್ಸುಮಾಡಬೇಕಾಷ್ಟೇ . ಹೀಗೆ ಜನರು ವ್ಯಾಕ್ಸಿನ್ ಹಾಕಿಸಿಕೊಳ್ತಿದ್ರೆ ಕೊರೊನಾ ಮಹಾಮರಿಯನ್ನ ತಡೆಗಟ್ಟಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ