ಬೂಸ್ಟರ್ ಡೋಸ್ ಅಭಿಯಾನಕ್ಕೂ ಮುನ್ನ ಕೋವಿಡ್ ವ್ಯಾಕ್ಸಿನ್ ಬೆಲೆ ಇಳಿಕೆ

ಶನಿವಾರ, 9 ಏಪ್ರಿಲ್ 2022 (18:26 IST)
ಏಪ್ರಿಲ್ 10ರಿಂದ ಬೂಸ್ಟರ್ ಡೋಸ್ ಅಭಿಯಾನ ಆರಂಭವಾಗಲಿದ್ದು, ಮತ್ತೊಂದೆಡೆ ಸೀರಮ್ ಇನ್ಸ್ ಟಿಟ್ಯೂಟ್ ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಸಿಂಗಲ್ ಡೋಸ್ ಬೆಲೆ ಖಾಸಗಿ ಆಸ್ಪತ್ರೆಗಳಲ್ಲಿ 225 ರೂಪಾಯಿಗೆ ಇಳಿಕೆಯಾಗಲಿದೆ ಎಂದು ವರದಿ ತಿಳಿಸಿದೆ.
 
ಶನಿವಾರ (ಏಪ್ರಿಲ್ 09) ಈ ಕುರಿತು ಟ್ವೀಟ್ ಮಾಡಿರುವ ಸೀರಮ್ ಇನ್ಸ್ ಟಿಟ್ಯೂಟ್ ನ ಸಿಇಒ ಅದಾರ್ ಪೂನಾವಾಲ್, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಲಸಿಕೆಗಳ ಬೆಲೆಯನ್ನು ಇಳಿಕೆ ಮಾಡಲು ನಿರ್ಧರಿಸಿರುವಾಗಿ ತಿಳಿಸಿದ್ದು,ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ಚರ್ಚಿಸಿದ ನಂತರ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಕೋವಿಡ್ ಲಸಿಕೆ ಬೆಲೆಯನ್ನು 600 ರೂಪಾಯಿಂದ 225 ರೂಪಾಯಿಗೆ ಇಳಿಕೆಯಾಗಿದೆ.
 
ಅದೇ ರೀತಿ ಭಾರತ್ ಬಯೋಟೆಕ್ ನ ಸಹ ಸಂಸ್ಥಾಪಕಿ ಸುಚಿತ್ರ ಎಲ್ಲಾ ಕೂಡಾ, ಈ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಬೆಲೆಯನ್ನು 1,200 ರೂಪಾಯಿಯಿಂದ 225 ರೂಪಾಯಿಗೆ ಇಳಿಕೆಯಾಗಲಿದೆ ಎಂದು ಘೋಷಿಸಿದ್ದರು.ಬೆಲೆ ಇಳಿಕೆ ಬಗ್ಗೆ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ, ಸಲಹೆ ಪಡೆದ ನಂತರ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ