ಬೆಂಗಳೂರು: ರಾಹುಲ್ ಗಾಂಧಿ ಅವರು ಈ ದೇಶದ ಯುವಕರು ಮುಂಚೂಣಿಗೆ ಬಂದು ಕೆಲಸ ಮಾಡಬೇಕು ಎಂದು ಆಸೆಯಿಟ್ಟು ಕೆಲಸ ಮಾಡುತ್ತಿದ್ದಾರೆ. ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬಿಜೆಪಿಯವರು ಅಭಿವೃದ್ದಿ ಕೆಲಸ ಮಾಡಿ ಈ ದೇಶದ ಜನರ ಬಳಿ ಮತಗಳನ್ನು ಕೇಳುತ್ತಿಲ್ಲ. ಕೇವಲ ಹಿಂದು, ಹಿಂದುತ್ವದ ಮುಖಾಂತರ ಜನರನ್ನು ವಿಭಜನೆ ಮಾಡಿ ಮತ ಕೇಳುತ್ತಿದ್ದಾರೆ.
ಬಾಬಾ ಸಾಹೇಬರು ಬರೆದಿದ್ದ ಸಂವಿಧಾನವನ್ನು ಜಾರಿಗೆ ತಂದಿದ್ದು ನೆಹರು ಅವರ ಸರ್ಕಾರ. ಈ ದೇಶದಲ್ಲಿ ಸಾವಿರಾರು ಅಭಿವೃದ್ದಿ ಕೆಲಸಗಳನ್ನು ಮಾಡಿರುವುದು ಕಾಂಗ್ರೆಸ್ ಸರ್ಕಾರ. ಇಡೀ ದೇಶದಲ್ಲಿ 5 ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳನ್ನು ನಿರ್ಮಾಣ ಮಾಡಿದ್ದು ಕಾಂಗ್ರೆಸ್ ಸರ್ಕಾರಗಳು.
ನರೇಗಾ ಕಾರ್ಯಕ್ರಮದ ಮೂಲಕ 25 ಕೋಟಿಗೂ ಹೆಚ್ಚು ಜನ ಉದ್ಯೋಗಿಗಳಾಗಿದ್ದಾರೆ. ಇದರಿಂದ ಅನೇಕ ಯುವಕರಿಗೆ ಅನುಕೂಲವಾಗಿದೆ. ಪಕ್ಷದ ಯುವಕರು ಸಿಗುವ ಅವಕಾಶಗಳನ್ನ ಬಳಸಿಕೊಂಡು ಮುಂದಕ್ಕೆ ಬರಬೇಕು.
ಸೈದ್ದಾಂತಿಕವಾಗಿ ನೀವು ಬಲವನ್ನು ಪಡೆಯಬೇಕು. ಯಾಕೆ ಕಾಂಗ್ರೆಸ್ ಪಕ್ಷದಲ್ಲಿ ನಾವು ಇರಬೇಕು ಎನ್ನುವ ನಿಲುವನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು. ಆಗ ಮಾತ್ರ ನೀವು ಸಮಾಜಕ್ಕೆ, ಪಕ್ಷಕ್ಕೆ ಕೊಡುಗೆ ನೀಡಲು ಸಾಧ್ಯ. ಬಿಜೆಪಿ ಹಿಂದುತ್ವ ಮೇಲೆ ಮತ ಕೇಳುತ್ತದೆ. ನಾನೂ ಹಿಂದು ಎಂದು ಹೆಮ್ಮೆಯಿಂದ ಹೇಳುತ್ತೇನೆ. ಆದರೆ ಇದನ್ನು ಮತರಾಜಕಾರಣಕ್ಕೆ ಬಳಸಿಕೊಳ್ಳಬಾರದು.