ಮೋದಿ ಅಕ್ರಮ ಮಾಡಿಯೇ ಚುನಾವಣೆ ಗೆದ್ದಿರೋದು, ಪ್ರಾಮಾಣಿಕತೆಯಿಂದಲ್ಲ: ಸಂತೋಷ್ ಲಾಡ್

Krishnaveni K

ಗುರುವಾರ, 18 ಸೆಪ್ಟಂಬರ್ 2025 (13:59 IST)
ಬೆಂಗಳೂರು: ಇಡೀ ದೇಶದಲ್ಲಿ ನರೇಂದ್ರ ಮೋದಿ ಅಕ್ರಮ ಮಾಡಿಯೇ ಚುನಾವಣೆ ಗೆದ್ದಿರೋದು. ಯಾವುದೂ ಪ್ರಾಮಾಣಿಕ ಗೆಲುವಲ್ಲ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ.

ಇಂದು ರಾಹುಲ್ ಗಾಂಧಿ ದೆಹಲಿಯಲ್ಲಿ ಮತಗಳ್ಳತನದ ಬಗ್ಗೆ ಮತ್ತೊಂದು ಸುತ್ತಿನ ಸುದ್ದಿಗೋಷ್ಠಿ ನೀಡಿ ಹಲವು ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದು ಮೋದಿ ಗೆದ್ದಿರೋದೆಲ್ಲಾ ಅಕ್ರಮದಿಂದಲೇ ಎಂದಿದ್ದಾರೆ.

ರಾಹುಲ್ ಗಾಂಧಿ ಆರೋಪ ನಿಜ. ಆಳಂದದಲ್ಲಿ ಚುನಾವಣೆ ಆಗಿ 5-6 ವರ್ಷವಾಗಿದೆ. ಎಸ್ಐಟಿಯವರು ಅಕ್ರಮದ ಬಗ್ಗೆ ಪತ್ರ ಬರೆದು ಪ್ರಶ್ನೆ ಮಾಡಿದ್ದರೂ ಇದುವರೆಗೆ ಚುನಾವಣಾ ಆಯೋಗ ಉತ್ತರ ಕೊಟ್ಟಿಲ್ಲ. ಕರ್ನಾಟಕ ಮಾತ್ರವಲ್ಲ, ಒರಿಸ್ಸಾ, ಮಹಾರಾಷ್ಟ್ರದಲ್ಲೂ ಆಗಿದೆ. ಬಿಹಾರದಲ್ಲಿ 3 ಲಕ್ಷ ಮನೆಗಳಿಗೆ 0 ಸಂಖ್ಯೆ ನೀಡಿದ್ದಾರೆ. ಇವರೆಲ್ಲಾ ಮೋದಿಯೆಂಬ ಮನುಷ್ಯನನ್ನು ದೇವರು ಮಾಡಿದ್ದಾರೆ. ಅದಾನಿಯಂತಹ ಶ್ರೀಮಂತನಿಗೆ 1 ರೂಪಾಯಿಗೆ 1 ಸಾವಿರ ಎಕರೆ ಭೂಮಿ ಕೊಟ್ಟಿದ್ದಾರೆ. ಇವರಿಗೆಲ್ಲಾ ಮಾನ ಮರ್ಯಾದೆ ಇದೆಯಾ ಎಂದು ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ