ಡಿಐಜಿ ರೂಪಾ ಪರವಾಗಿದ್ದ 40 ಕೈದಿಗಳು ಬಳ್ಳಾರಿಗೆ ಶಿಪ್ಟ್

ಭಾನುವಾರ, 16 ಜುಲೈ 2017 (12:39 IST)
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆಯಲು ಎಐಎಡಿಎಂಕೆ ನಾಯಕಿ ಶಶಿಕಲಾ 2 ಕೋಟಿ ರೂಪಾಯಿಗಳ ಲಂಚ ನೀಡಿದ್ದಾರೆ ಎಂದು ವರದಿ ನೀಡಿದ ನಂತರ ಡಿಐಜಿ ರೂಪಾ ಪರವಾಗಿದ್ದ 40 ಕೈದಿಗಳನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.
 
ಶಶಿಕಲಾ ವಾಸವಾಗಿರುವ ಕೋಣೆಯಲ್ಲಿ ಪ್ರತ್ಯೇಕ ಅಡುಗೆ ಮನೆಯನ್ನು ಪಡೆಯಲು ಡಿಜಿಪಿ(ಕಾರಾಗೃಹ) ಸತ್ಯನಾರಾಯಣ್ ರಾವ್ ಅವರಿಗೆ 1 ಕೋಟಿ ರೂಪಾಯಿ ನೀಡಲಾಗಿದೆ. ಮತ್ತೊಂದು ಕೋಟಿ ರೂಪಾಯಿಯನ್ನು ಜೈಲಿನ ವಾರ್ಡನ್ ಸೇರಿದಂತೆ ಇತರ ಜೈಲಿನ ಅಧಿಕಾರಿಗಳಿಗೆ ವಿತರಿಸಿದ್ದಾರೆ ಎನ್ನುವ ಡಿಐಜಿ ರೂಪಾ ಅವರ ವರದಿಯ ಬಗ್ಗೆ ತನಿಖೆ ನಡೆಸುವಂತೆ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದ ಸಮಿತಿಗೆ ಸಿಎಂ ಸಿದಗ್ದರಾಮಯ್ಯ ಆದೇಶಿಸಿದ್ದಾರೆ.
 
ತಮಿಳುನಾಡಿನಲ್ಲಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಶಿಕ್ಷೆಗೆ ಗುರಿಯಾಗಿರುವ 59 ವರ್ಷ ವಯಸ್ಸಿನ ಶಶಿಕಲಾ, ವಿಶೇಷ ಆತಿಥ್ಯ ಪಡೆಯಲು ಕೋಟಿ ಕೋಟಿ ಹಣದ ಸುರಿಮಳೆಗೈದಿದ್ದಾರೆ ಎನ್ನಲಾಗುತ್ತಿದೆ. 
 
ನಾನು ನನ್ನ ವರದಿಯನ್ನು ಡಿಜಿಪಿ ಆರ್.ಕೆ.ದತ್ತಾ ಅವರಿಗೆ ನೀಡಿದ್ದೇನೆಯೇ ಹೊರತು ಮಾಧ್ಯಮಗಳಿಗೆ ಅಥವಾ ಇನ್ನಾವುದೋ ಸಂಸ್ಥೆಗಳಿಗೆ ನೀಡಿಲ್ಲ. ಮಾಧ್ಯಮಗಳಿಗೆ ಹೇಗೆ ವರದಿ ತಲುಪಿದೆ ಎನ್ನುವುದನ್ನು ನೀವೇ ತನಿಖೆ ನಡೆಸಬೇಕು ಎಂದು ಡಿಐಜಿ ರೂಪಾ ಮಾಧ್ಯಮಗಳಿಗೆ ತಿರುಗೇಟು ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ