ರಾಹುಲ್ ಗಾಂಧಿ ಭೇಟಿ ಮಾಡಲಿರುವ ಸತೀಶ್ ಜಾರಕಿಹೊಳಿ: ಬೇಡಿಕೆಗಳೇನೇನು?
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಜತೆಗೆ ಇಂದು ಸತೀಶ್ ಜಾರಕಿಹೊಳಿ ರಾಹುಲ್ ಭೇಟಿ ಮಾಡಲಿದ್ದು, ಬೇಡಿಕೆಗಳ ಪಟ್ಟಿ ಮುಂದಿಡಲಿದ್ದಾರೆ.
ಬೆಳಗಾವಿ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಭಿನ್ನಮತ, ಅದರ ಕಾರಣ, ಸಚಿವ ಡಿಕೆ ಶಿವಕುಮಾರ್ ಹಸ್ತಕ್ಷೇಪದ ಬಗ್ಗೆ ದೂರು ನೀಡುವುದು ಮತ್ತು ನಾಯಕ ಸಮುದಾಯದ ಒಬ್ಬರಿಗೆ ಸಚಿವ ಸ್ಥಾನಕ್ಕೆ ಬೇಡಿಕೆ ಇಡುವುದು ಇತ್ಯಾದಿ ಬೇಡಿಕೆಗಳ ಪಟ್ಟಿಯನ್ನು ಸತೀಶ್ ಜಾರಕಿಹೊಳಿ ರಾಹುಲ್ ಗಾಂಧಿ ಮುಂದಿಡಲಿದ್ದಾರೆ ಎನ್ನಲಾಗಿದೆ.