ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಾಲಿನ ಎಟಿಎಂ ಎಂದು ಆರೋಪಿಸಿದ ಬಿಜೆಪಿ

ಬುಧವಾರ, 19 ಸೆಪ್ಟಂಬರ್ 2018 (15:07 IST)
ಬೆಂಗಳೂರು : ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಾಲಿನ ಎಟಿಎಂ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿಕೆ ನೀಡುವುದರ ಮೂಲಕ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು,’ ಕಾಂಗ್ರೆಸ್ ಹೈಕಮಾಂಡ್ ಗೆ ಡಿ.ಕೆ.ಶಿವಕುಮಾರ್ ಅವರಿಂದ ಕೋಟಿ ಕೋಟಿ ಹಣ ಸಿಕ್ಕಿದೆ ‘ ಎಂದು ಹೇಳಿದ್ದಾರೆ. ಹಾಗೇ ಸಚಿವ ಡಿ.ಕೆ.ಶಿವಕುಮಾರ್ ಅವರ ಡೈರಿ ಬಗ್ಗೆ ಪ್ರಸ್ತಾಪಿಸಿದ ಸಂಬಿತ್ ಪಾತ್ರ ಅವರು ಡೈರಿಯಲ್ಲಿರೋ ‘ SG ‘ ಅಂದ್ರೆ ಸೋನಿಯಾ ಗಾಂಧಿ ಹಾಗೂ ‘RG ‘ ಅಂದ್ರೆ ರಾಹುಲ್ ಗಾಂಧಿ ಎಂದು ಅರ್ಥ ಎಂದು ಕೋಡ್ ವರ್ಡ್ ಬಗ್ಗೆ ಅವರು ತಿಳಿಸಿದ್ದಾರೆ.


ಹಾಗೇ ಡೈರಿ ದಾಖಲೆಗಳನ್ನು ಬಿಡುಗಡೆ ಮಾಡಿದ ಬಿಜೆಪಿ ವಕ್ತಾರ, ‘ಹವಾಲಾ ಮೂಲಕ ಕಾಂಗ್ರೆಸ್  ಹೈಮಾಂಡ್ ಗೆ ಹಣ ಸಂದಾಯವಾಗಿದೆ. ಕರ್ನಾಟಕದಿಂದ ಚಾಂದ್ ನಿ ಚೌಕ್, ಅಲ್ಲಿಂದ ಕಾಂಗ್ರೆಸ್ ನಾಯಕರಿಗೆ ಹಣ ಸಂದಾಯವಾಗಿದೆ. ಹೀಗೆ ಹವಾಲಾ ದಂಧೆಕೋರರ ಮೂಲಕ ಹಣ ಸಂದಾಯವಾಗ್ತಿತ್ತು’ ಎಂದು ಅವರು ಆರೋಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ