ಕೊರೋನಾ ಇಫೆಕ್ಟ್: ಆನ್ ಲೈನ್ ನಲ್ಲೇ ಶಾಲೆ ಫೀಸ್ ಕಟ್ಟಲು ಸೂಚನೆ

ಭಾನುವಾರ, 26 ಏಪ್ರಿಲ್ 2020 (09:02 IST)
ಬೆಂಗಳೂರು: ಕೊರೋನಾದಿಂದಾಗಿ ಶಾಲೆಗಳೂ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಪಾಠ ಚಟುವಟಿಕೆಗಳ ಜತೆಗೆ ಶುಲ್ಕ ಪಾವತಿಗೂ ಆನ್ ಲೈನ್ ಹಾದಿ ಹಿಡಿದಿವೆ.

 
ಕೆಲವು ವೃತ್ತಿಪರ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಈಗಾಗಲೇ ಆನ್ ಲೈನ್ ಮೂಲಕ ಶಿಕ್ಷಣ ನೀಡುತ್ತಿವೆ. ಈ ಬಗ್ಗೆ ಸರ್ಕಾರವೂ ಸೂಚನೆ ನೀಡಿದೆ.

ಇದರ ಜತೆಗೆ ಹೊಸ ವರ್ಷದ ಆರಂಭಕ್ಕೆ ಖಾಸಗಿ ಶಾಲೆಗಳು ಸಿದ್ಧಗೊಳ್ಳುತ್ತಿದ್ದು, ಶುಲ್ಕ ಪಾವತಿಗೆ ಪೋಷಕರು ಶಾಲೆಗೆ ಬರಲು ಲಾಕ್ ಡೌನ್ ಅಡ್ಡಿಯಾಗಿದೆ. ಹೀಗಾಗಿ ಆನ್ ಲೈನ್ ಮೂಲಕ ಕಂತುಗಳಲ್ಲಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ. ಆದರೆ ಶಾಲೆ ಯಾವಾಗ ಆರಂಭವಾಗುತ್ತದೆ ಎಂಬುದು ಇನ್ನೂ ಅನಿಶ್ಚಿತತೆಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ