ಸದ್ದಿಲ್ಲದೇ ಟಿ20 ವಿಶ್ವಕಪ್ ಗೆ ತಯಾರಿ ನಡೆಸುತ್ತಿರುವ ಐಸಿಸಿ
ಇದರ ನಡುವೆಯೇ ಅಕ್ಟೋಬರ್ ವೇಳೆಗೆ ಪರಿಸ್ಥಿತಿ ಸುಧಾರಿಸಬಹುದು ಎಂಬ ವಿಶ್ವಾಸದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಜತೆಗೆ ಐಸಿಸಿ ವಿಶ್ವಕಪ್ ಗೆ ತಯಾರಿ ನಡೆಸುತ್ತಿದೆ. ಆರು ತಿಂಗಳಿಗೆ ಆಸ್ಟ್ರೇಲಿಯಾ ವಿದೇಶೀಯರಿಗೆ ನಿರ್ಬಂಧ ವಿಧಿಸಿರುವುದೂ ಅಲ್ಲಿ ಟೂರ್ನಿ ನಡೆಸಲು ಕಷ್ಟವಾಗಿದೆ. ಹಾಗಿದ್ದರೂ ಪರಿಸ್ಥಿತಿ ಸುಧಾರಿಸಿದರೆ ಕ್ರೀಡಾ ಕೂಟ ನಡೆಸಲು ಅನುಮತಿ ಸಿಗಬಹುದು. ಹೀಗಾಗಿ ತೆರೆಮರೆಯಲ್ಲೇ ಐಸಿಸಿ ತಯಾರಿ ನಡೆಸಿದೆ.