ಒಡಿಶಾದಲ್ಲಿ ‘ಸ್ಕಬ್ ಟೈಫಸ್’ ಜ್ವರ; 6 ಮಂದಿ ಸಾವು

ಮಂಗಳವಾರ, 19 ಸೆಪ್ಟಂಬರ್ 2023 (17:37 IST)
ಒಡಿಶಾದಲ್ಲಿ ‘ಸ್ಕಬ್ ಟೈಫಸ್’ ಎಂಬ ಸೋಂಕು ಜ್ವರ ಕಾಣಿಸಿಕೊಂಡಿದ್ದು, ಈವರೆಗೆ ಆರು ಮಂದಿ ಮೃತಪಟ್ಟಿದ್ದಾರೆ. ಬರ್ಗರ್ ಜಿಲ್ಲೆಯಲ್ಲಿ ಐದು ಮಂದಿ ಮತ್ತು ಸುಂದರ್‌ಗಢ ಜಿಲ್ಲೆಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸುಂದರ್‌ಗಢ ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 132 ಸ್ಕಬ್ ಟೈಫಸ್ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಬಹುತೇಕ ಮಂದಿ ಗುಣಮುಖರಾಗಿದ್ದಾರೆ ಎಂದು ಮುಖ್ಯ ಜಿಲ್ಲಾ ವೈದ್ಯಕೀಯ ಹಾಗೂ ಸಾರ್ವಜನಿಕ ಆರೋಗ್ಯ ಅಧಿಕಾರಿ ಚರಣ್ ನಾಯಕ್ ತಿಳಿಸಿದ್ದಾರೆ. ವ್ಯಕ್ತಿಗಳಿಗೆ ಚಿಗಟೆ ಕಚ್ಚಿದರೆ ಸ್ಕಬ್‌ ಟೈಫಸ್ ಜ್ವರ ಹರಡುತ್ತದೆ. ಕೃಷಿ ಭೂಮಿ ಅಥವಾ ಕಾಡು ಪ್ರದೇಶಕ್ಕೆ ಭೇಟಿ ನೀಡುವ ಜನರಿಗೆ ಚಿಗಟೆ ಕಚ್ಚುವ ಸಾಧ್ಯತೆ ಇದ್ದು, ಸೋಂಕಿಗೆ ಒಳಗಾಗುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ