ಏಪ್ರಿಲ್ 16ರಿಂದ ಸೆಕೆಂಡ್ ಪಿಯು ಎಕ್ಸಾಂ- ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಬುಧವಾರ, 19 ಜನವರಿ 2022 (21:10 IST)
ಬೆಂಗಳೂರು: ದ್ವಿತೀಯ ಪಿಯುಸಿ ಹಾಗೂ ಪ್ರಥಮ ಪಿಯುಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ.
ಏಪ್ರಿಲ್ 16 ರಿಂದ ಮೇ 4 ವರೆಗೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಪಿಯು ಬೋರ್ಡ್ ನಿಂದ ವೇಳಾಪಟ್ಟಿ ಪ್ರಕಟವಾಗಿದ್ದು, ಆಕ್ಷೇಪಣೆ ಸಲ್ಲಿಸಲು ಫೆಬ್ರವರಿ 1 ವರೆಗೆ ಅವಕಾಶ ನೀಡಲಾಗಿದೆ. ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಫೆಬ್ರವರಿ 17 ರಿಂದ ಮಾರ್ಚ್ 25 ವರೆಗೆ ನಡೆಸಲು ದಿನಾಂಕ ನಿಗದಿಯಾಗಿದೆ..
ದ್ವಿತೀಯ ಪಿಯುಸಿ ಪರೀಕ್ಷೆಗೆ ಶೇ.70ರಷ್ಟು ಪಠ್ಯಕ್ಕೆ ಮಾತ್ರ ಪರೀಕ್ಷೆ ನಡೆಯಲಿದೆ. ಭಾಷಾ ವಿಷಯಕ್ಕೆ ಶೇ.70ರಷ್ಟು ಪಠ್ಯದಲ್ಲಿ ಪರೀಕ್ಷೆ ನಡೆಯಲಿದ್ದು, ಐಚ್ಛಿಕ ವಿಷಯಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಶೇ.100ರಷ್ಟು ಪಠ್ಯದಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪಿಯು ಬೋರ್ಡ್ ಆದೇಶ ಹೊರಡಿಸಿದೆ.
ಇತ್ತ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗೂ ದಿನಾಂಕ ನಿಗದಿ ಮಾಡಲಾಗಿದೆ. ಮಾರ್ಚ್ 28 ರಿಂದ ಏಪ್ರಿಲ್ 13 ರವರೆಗೆ ಪರೀಕ್ಷೆ ನಡೆಯಲಿದೆ. ಪ್ರಥಮ ಪಿಯುಸಿ ಪರೀಕ್ಷೆಗೆ ಶೇ.70 ಪಠ್ಯಕ್ಕೆ ಮಾತ್ರ ಪರೀಕ್ಷೆ ನಡೆಯಲಿದ್ದು, ಭಾಷಾ ವಿಷಯಕ್ಕೆ ಶೇ.70ರಷ್ಟು ಪಠ್ಯದಲ್ಲಿ ಪರೀಕ್ಷೆ ನಡೆಯಲಿದೆ. ಇಲ್ಲಿಯೂ ಐಚ್ಛಿಕ ವಿಷಯಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಶೇ.100ರಷ್ಟು ಪಠ್ಯದಲ್ಲಿ ಪರೀಕ್ಷೆ ನಡೆಯಲಿದೆ.
ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ ಇಂತಿದೆ:
ಏ.16- ಗಣಿತ, ಶಿಕ್ಷಣ, ಬೇಸಿಕ್ ಗಣಿತ.
ಏ.18- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ.
ಏ.19– ಹೆಲ್ತ್ ಕೇರ್, ರೀಟೇಲ್, ಇನ್ಫಾರ್ಮೇಶನ್ ಟೆಕ್ನಾಲಜಿ.