ಪತಿಯನ್ನ ಸ್ನಾನಕ್ಕೆಂದು ಬಾತ್‌ರೂಮ್‌ಗೆ ಕಳಿಸಿ, ಪ್ರಿಯಕರನೊಂದಿಗೆ ಪತ್ನಿ ಎಸ್ಕೇಪ್!

ಭಾನುವಾರ, 20 ಆಗಸ್ಟ್ 2023 (08:28 IST)
ಬೆಂಗಳೂರು : ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಪತ್ನಿ ಗಂಡನಿಗೆ ಕೈಕೊಟ್ಟು ಎಸ್ಕೇಪ್ ಆಗಿದ್ದಾಳೆ ಅಂತಾ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ಧಾನೆ.

ಬೆಂಗಳೂರಿನ ರಾಜರಾಜೇಶ್ವರಿನಗರದ ನಿವಾಸಿ ರಮೇಶ್ ಕಳೆದ ಎರಡು ತಿಂಗಳ ಹಿಂದೆ ಮದುವೆಯಾಗಿದ್ದರು. ಸಂಸಾರದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು.  ಪತಿ ರಮೇಶ್ ಜೊತೆಗೆ ಚೆನ್ನಾಗಿಯೇ ಇದ್ದ ಪತ್ನಿ, ಇದೇ ಆಗಸ್ಟ್ 12ರಂದು ಬೆಳಗ್ಗೆ ಪತಿ ರಮೇಶ್ನನ್ನ ಸ್ನಾನ ಮಾಡುವಂತೆ ಬಾತ್ ರೂಮ್ಗೆ ಕಳುಹಿಸಿದ್ದಾಳೆ.

ಪತಿ ಒಳಗೆ ಹೋದ ತಕ್ಷಣ ಪತ್ನಿ ಹೊರಗಿನಿಂದ ಬಾತ್ರೂಮ್ ಬಾಗಿಲು ಹಾಕಿಕೊಂಡು ಮನೆಯ ಬಾಗಿಲನ್ನೂ ಲಾಕ್ ಮಾಡ್ಕೊಂಡು ಎಸ್ಕೇಪ್ ಆಗಿದ್ದಾಳೆ. ನಂತರ ಪತಿ ರಮೇಶ್ ಆರ್.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತ್ನಿ ತನ್ನ ಸ್ನೇಹಿತ ಕಾರ್ತಿಕ್ ಜೊತೆಗೆ ಹೋಗಿದ್ದಾಳೆ ಅಂತಾ ದೂರಿನಲ್ಲಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ