ಮನೆಯವರನ್ನ ದೇವಸ್ಥಾನಕ್ಕೆ ಕಳುಹಿಸಿ, ಚಿನ್ನಾಭರಣ ದೋಚಿ ಎಸ್ಕೇಪ್

ಶುಕ್ರವಾರ, 28 ಜುಲೈ 2023 (19:20 IST)
ಜನರ  ಕಷ್ಟಗಳನ್ನೇ ಬಂಡವಾಳ ಮಾಡಿಕೊಂಡ ಅದೇಷ್ಟೋ ಮಂದಿ ಸರಿಯಾಗಿ ಟೋಪಿ ಹಾಕಿರೋದನ್ನ ನಾವು ಕೇಳಿದ್ದೇವೆ, ನೋಡಿದ್ದೇವೆ. ಇಲ್ಲೋಬ್ಬ ಜ್ಯೋತಿಷಿ ಕೂಡ ಹಾಗೇ ಮಾಡಿದ್ದಾನೆ.ಇತನ ಹೆಸರು ಸುರೇಶ್ ಪಾಟೀಲ್ ಮೂಲತಃ ಹೊಸಪೇಟೆಯನು ಅಂಗೈ ನೋಡಿ ಶಾಸ್ತ್ರ ಹೇಳೋ ಅಸಾಮಿ. ಯಲಹಂಕ ಸಮೀಪ ಇದೇ ಕೆಲಸ ಮಾಡಿಕೊಂಡಿದ್ದ. ಅಳ್ಳಾಲಸಂದ್ರದ ನಿವಾಸಿ ಇಂದ್ರಮ್ಮ ಮನೆ ಕೆಲಸ ಮಾಡಿಕೊಂಡಿದ್ದು ಇತ್ತೀಚೆಗೆ ತಮ್ಮ ಮಗಳಿಗೆ  ಮದುವೆ ಮಾಡಿಕೊಟ್ಟಿರುತ್ತಾಳೆ ಆದ್ರೇ ಯಾಕೋ ಮಗಳ ಜೀವನದಲ್ಲಿ ‌ಹೊಂದಾಣಿಕೆಯಿಲ್ಲದೆ ಸಂಸಾರದಲ್ಲಿ ಯಾವಾಗಲೂ ಜಗಳ ಬೇಸೆತ್ತ ಮಗಳು ಕೂಡ ಗಂಡನ ಮನೆ ಬಿಟ್ಟು ತಾಯಿ ಇಂದ್ರಮ್ಮನ ಮನೆ ಸೇರಿದ್ಲು. 
 
ಇನ್ನೂ ಮಗಳ ಜೀವನದ ಬಗ್ಗೆ ‌ಚಿಂತೆ ಮಾಡುತ್ತಿದ್ದಳು ಆಗ ಯಾರೋ ಸಂಬಂದಿಕರು ಜ್ಯೋತಿಷಿ ಸುರೇಶ್ ಪಾಟೀಲ್ ಬಗ್ಗೆ ಹೇಳಿದ್ದಾರೆ ಅಲ್ಲಿಗೆ ಹೋದಾಗ ನಿಮ್ಮ ಮನೆಯಲ್ಲಿ ‌ಆಮಾವಾಸ್ಸೆ ದಿನ ಪೂಜೆ ಮಾಡಿದ್ರೆ ಸರಿಹೋಗುತ್ತೆ ಪೂಜೆ ಮಾಡಿದ ಮೇಲೆ  ಆ ದಿನ ಮನೆಯಲ್ಲಿ ಯಾರು ಇರಬಾರದು ಅಂತ ಹೇಳಿದ್ದಾನೆ .ಎಲ್ಲರನ್ನೂ ದೇವಸ್ಥಾನ ಕ್ಮೆ ಕಳುಹಿಸಿ ರಾತ್ರಿ ಬಂದು ಮನೆಯಲ್ಲಿ ದ್ದ ಚಿ‌ನ್ನಾಭರಣ, ಐದು ಲಕ್ಷ ಹಣ ಕದ್ದು ಅದೇ ಜಾಗದಲ್ಲಿ ನಿಂಬೆಹಣ್ಣು ಇಟ್ಟು ಹೋಗಿದ್ದಾನೆ. ನಂತರ ಅವರಿಗೆ ಬೀರು ಬಾಗಿಲು ತೆಗೆದುನೋಡಿ ಎಂದು ಕೂಡ ಹೇಳಿದ್ದಾನೆ.
ಇನ್ನೂ ಬೀರು ಓಪನ್ ಮಾಡಿದ್ರೆ ನಿಂಬೆಹಣ್ಣು ಇದೆ. ಇದು ನಿಮ್ಮ ಬೀಗರ ಕಿತಾಪತಿ ನನಗೆ 65 ದಿನ ಟೈಂ ಕೊಡಿ ನಾನು ಸರಿ ಮಾಡುತ್ತೇನೆಂದು ಹೇಳಿ ಹೋದವನು ಪೋನ್ ಸ್ವಿಚ್ ಆಪ್ ಆಗಿದೆ ಮತ್ತೆ ಬರ್ಲೆ ಇಲ್ಲ ಅನುಮಾನ ಗೊಂಡು ಯಲಹಂಕ ಠಾಣೆ ಗೆ ದೂರು ನೀಡಿದ್ದಾರೆ. ಪೋಲಿಸರು ಜ್ಯೋತಿಷಿ ಗಾಗಿ ಒಳ್ಳೆ ಟೈಂ ಗಾಗಿ ಕಾಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ