ಸಹಕಾರಿ ಕ್ಷೇತ್ರದಿಂದ ಇಡೀ ದೇಶಕ್ಕೆ ಸಂದೇಶ ರವಾನೆ : ಅಮಿತ್ ಶಾ
ಶನಿವಾರ, 31 ಡಿಸೆಂಬರ್ 2022 (11:41 IST)
ಬೆಂಗಳೂರು : ಕರ್ನಾಟಕದ ಸಹಕಾರಿ ಕ್ಷೇತ್ರದಿಂದ ಇಡೀ ದೇಶಕ್ಕೆ ಸಂದೇಶ ರವಾನೆಯಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ.
ನಗರದಲ್ಲಿ ಅತ್ಯುತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ನಂತರ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರ ಅತ್ಯುತ್ತಮ ಕೆಲಸ ಮಾಡಿದೆ.
ಇವತ್ತು ಸಹಾಕರ ರಂಗದ ಅನೇಕ ಫಲಾನುಭವಿಗಳಿಗೆ ಯೋಜನೆ ತಲುಪಿಸಲಾಗಿದೆ. ಕರ್ನಾಟಕದಲ್ಲಿ ಸಹಕಾರಿ ಆಂದೋಲನ ನೂರು ವರ್ಷಕ್ಕಿಂತಲೂ ಹೆಚ್ಚು ಕಾಲ ಸಮರ್ಥವಾಗಿ ನಡೆದು ಬಂದಿದೆ.
ಎಸ್.ಎಸ್. ಪಾಟೀಲ್ರಿಂದ ಕರ್ನಾಟಕದ ಮೊದಲ ಸಹಕಾರಿ ಘಟಕ ಪ್ರಾರಂಭ ಆಯಿತು. ಇಡೀ ವಿಶ್ವಕ್ಕೆ ಉದಾಹರಣೆ ರೂಪದಲ್ಲಿ ಕರ್ನಾಟಕ ಸಹಕಾರಿ ಕ್ಷೇತ್ರ ನಿಂತಿದೆ ಎಂದು ಹೊಗಳಿದ್ದಾರೆ.
30 ಲಕ್ಷಕ್ಕೂ ಹೆಚ್ಚು ರೈತರಿಗೆ, ರೈತ ಮಹಿಳೆಯರಿಗೆ ಸಹಕಾರಿ ಕ್ಷೇತ್ರದ ಲಾಭ ಸಿಗುತ್ತಿದೆ. ಸಹಕಾರಿ ಸಂಘಟನೆ ಇಲ್ಲದಿದ್ದರೆ ರೈತರಿಗೆ ಯಾವುದೇ ಲಾಭಾಂಶ ಸಿಗುತ್ತಿರಲಿಲ್ಲ. ಕರ್ನಾಟಕ ಸರ್ಕಾರದ ಸಾಧನೆ ಸಹಕಾರ ಕ್ಷೇತ್ರದ ಸಾಧನೆ ಉತ್ತಮವಾಗಿದೆ.