ಪ್ರತ್ಯೇಕ ರಾಜ್ಯದ ಕೂಗು: ಕರಾವಳಿಯಲ್ಲಿ ಶುರು…

ಸೋಮವಾರ, 30 ಜುಲೈ 2018 (18:59 IST)
ಕರ್ನಾಟಕ ಸರ್ಕಾರ ಬಜೆಟ್ ನಲ್ಲಿ ಕರಾವಳಿಯನ್ನು ಕಡೆಗಣಿಸಿದೆ. ಹೀಗಾಗಿ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಕೊಟ್ಟರೆ ನಮ್ಮ ತುಳುನಾಡು ಪ್ರತ್ಯೇಕ ರಾಜ್ಯದ ಬೇಡಿಕೆ ಈಡೇರಿಸಬೇಕಾಗುತ್ತದೆ. ಹೀಗಂತ ಕೂಗು ಮತ್ತೆ ಕೇಳಿಬರಲಾರಂಭಿಸಿದೆ.


ಕರಾವಳಿ ಭಾಗದಲ್ಲೂ ಪ್ರತ್ಯೇಕ ರಾಜ್ಯದ ಕೂಗು ಆರಂಭವಾಗಿದೆ. ಉತ್ತರ ಕರ್ನಾನಟಕ್ಕೆ ಪ್ರತ್ಯೇಕ ರಾಜ್ಯ ಮಾನ್ಯತೆ ವಿಚಾರಕ್ಕೆ ಸಂಬಂಧಿಸಿದಂತೆ ಅವರಿಗೆ ಕೊಟ್ಟರೆ ನಮಗೂ ಪ್ರತ್ಯೇಕ ರಾಜ್ಯ ಬೇಕು ಎಂದು ಮಂಗಳೂರಿನಲ್ಲಿ ನಮ್ಮ ತುಳುನಾಡು ಟ್ರಸ್ಟ್ ಒತ್ತಾಯ ಮಾಡಿದೆ.

ಟ್ರಸ್ಟ್ ನ ಸದಸ್ಯರು ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ ಕಾಸರಗೋಡು ಸೇರಿಸಿ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಈಡೇರಿಸಬೇಕು. ಹೆಚ್ಚಿಗೆ ತೆರಿಗೆ ಕಟ್ಟುತ್ತಿರೊದ್ರಲ್ಲಿ ರಾಜ್ಯದಲ್ಲಿ ಕರಾವಳಿಗರೆ ನಂಬರ್ ಒನ್ ಇದ್ದಾರೆ. ಹೀಗಾಗಿ ಪ್ರತ್ಯೇಕ ರಾಜ್ಯ ಕೊಡದೆ ಹೋದ್ರೆ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ