ಆ.12, 14ರಂದು ದೇಶವ್ಯಾಪಿ ಪ್ರತಿಭಟನೆ ಏಕೆ ಗೊತ್ತಾ?

ಶನಿವಾರ, 28 ಜುಲೈ 2018 (19:03 IST)
ಸ್ವಾಮಿನಾಥನ್ ನೀಡಿದ್ದ ವರದಿ ಅನುಸಾರ ರೈತರ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ದೇಶವ್ಯಾಪಿ ಆಗಸ್ಟ್ 12 ಮತ್ತು 14 ರಂದು ಕಿಸಾನ್ ಯಾತ್ರೆಯನ್ನ ಹಮ್ಮಿಕೊಳ್ಳಲಾಗಿದೆ.
ಆಗಸ್ಟ್ 12 ಮತ್ತು 14 ರಂದು ಮೈಸೂರಿನಲ್ಲಿ ರೈತರ ಬೃಹತ್ ಸಮಾವೇಶ ನಡೆಸಲಾಗುವುದು ಅಂತ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬುರು ಶಾಂತಕುಮಾರ್ ಹೇಳಿದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಅವತ್ತು ರೈತರು ಪ್ರತಿಭಟನೆ ನಡೆಸ್ತಾರೆ.
ಮುಖ್ಯವಾಗಿ ರಾಜ್ಯದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡ್ಬೇಕು ಅಂತ ಆಗ್ರಹಿಸಲಾಗ್ತಿದೆ. ಇದು ಬರೀ ರಾಜ್ಯ ಸರ್ಕಾರವಷ್ಟೇ ಅಲ್ಲ, ರೈತರ ಸಾಲ ಮನ್ನಾಗೆ ಕೇಂದ್ರವೂ ಕೈಜೋಡಿಸ್ಬೇಕು ಅಂತ ಆಗ್ರಹಿಸಿದ್ರು.

ಇದೇ ವೇಳೆ ಪ್ರತ್ಯೇಕ ರಾಜ್ಯದ ಕೂಗಿಗೆ ತಾವು ಬೆಂಬಲಿಸೋದಿಲ್ಲ. ಅಖಂಡ ಕರ್ನಾಟಕದ ಕಲ್ಪನೆ ಹಾಗೇ ಇರಬೇಕೆಂಬುದು ಕಬ್ಬು ಬೆಳೆಗಾರರ ಸಂಘದ ಆಶಯ. ಆದ್ರೇ, ಮಹದಾಯಿಯಂತ ಕುಡಿಯೋ ನೀರಿನ ಮಹತ್ವಾಂಕ್ಷಿ ಯೋಜನೆಯ ಸಮಸ್ಯೆಯನ್ನ ಹಾಗೇ ಇರಿಸಿದಾರೆ. ಪ್ರಾದೇಶಿಕ ಅಸಮತೋಲನವನ್ನ ನಿವಾರಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಅಂತ ಇದೇ ವೇಳೆ ಕುರುಬೂರು ಒತ್ತಾಯಿಸಿದ್ರು.

ಸಾರಿ ಕಬ್ಬಿನ ಇಳುವರಿ ಹೆಚ್ಚಾಗುವ ಸಾಧ್ಯತೆಯಿದೆ. ಕಬ್ಬಿಗೆ ಬೆಂಬಲ ಬೆಲೆಯನ್ನ ಹೆಚ್ಚಿಸ್ಬೇಕು ಹಾಗೂ ಬಾಕಿ ಇರುವ ಹಣವನ್ನ ಕಬ್ಬು ಬೆಳೆಗಾರರಿಗೆ ನೀಡ್ಬೇಕು ಅಂತ ಆಗ್ರಹಿಸಿದ್ರು.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ