ಸರಣಿ ಕಳ್ಳತನಕ್ಕೆ ಬೆಚ್ಚಿ ಬಿದ್ದ ಜನರು

ಶುಕ್ರವಾರ, 8 ಡಿಸೆಂಬರ್ 2017 (09:30 IST)
ಕೊಡಗು: ರಾತ್ರೋರಾತ್ರಿ ಎಂಟಕ್ಕೂ ಅಧಿಕ ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ಘಟನೆಯೊಂದು ಕೊಡಗು ಜಿಲ್ಲೆಯ  ಸೋಮವಾರ ಪೇಟೆ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.


ಕೊಡಗು ಜಿಲ್ಲೆಯ  ಸೋಮವಾರ ಪೇಟೆ ಸಮೀಪದ  ಶನಿವಾರಸಂತೆಯ ಮೂರು ಅಂಗಡಿಗಳಲ್ಲಿ, ಬಸ್ ನಿಲ್ದಾಣದ ಬಳಿ ಇರುವ ನಾಲ್ಕು ಅಂಗಡಿಗಳಲ್ಲಿ, ಬೀಟಿಕಟ್ಟೆ ಗ್ರಾಮದ ಎರಡು ಅಂಗಡಿಗಳಲ್ಲಿ ಕಳ್ಳತನವಾಗಿದೆ. ಅಂಗಡಿಗಳ ಶೆಟರ್ ಮುರಿದು ಖದೀಮರು ಕಳ್ಳತನ ಮಾಡಿದ್ದಾರೆ.


ಮೆಡಿಕಲ್ ಶಾಪ್, ಸ್ಟೋರ್ ಸೇರಿ ವಿವಿಧ ಅಂಗಡಿಗಳಿಗೆ ಕನ್ನ ಹಾಕಿದ್ದಾರೆ. ಸರಣೆ ಕಳ್ಳತನ ವಾಗಿರುವುದನ್ನು ನೋಡಿ ತಾಲೂಕಿನ ಜನರು ಬೆಚ್ಚಿ ಬಿದ್ದಿದ್ದಾರೆ. ಶನಿವಾರಸಂತೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ