ಏಕದಿನ ಸರಣಿ ಆಡಲು ಭಾರತ ವಿಮಾನ ಹತ್ತಿದ್ದ ಲಂಕಾ ಆಟಗಾರರನ್ನು ತಡೆದ ಸಚಿವರು!

ಬುಧವಾರ, 6 ಡಿಸೆಂಬರ್ 2017 (07:10 IST)
ಕೊಲೊಂಬೋ: ಭಾರತದ ವಿರುದ್ಧ ಟೆಸ್ಟ್ ಸರಣಿ ಮುಕ್ತಾಯವಾದ ಬಳಿಕ ಏಕದಿನ ಸರಣಿ ಆಡಲು ವಿಮಾನ ಏರಲಿದ್ದ 9 ಲಂಕಾ ಕ್ರಿಕೆಟಿಗರನ್ನು ಅಲ್ಲಿನ ಕ್ರೀಡಾ ಸಚಿವ ದಯಸಿರಿ ಜಯಸೇಖರ ತಡೆಹಿಡಿದಿದ್ದಾರೆ.
 

ಭಾರತಕ್ಕೆ ತೆರಳದಂತೆ ಅಲ್ಲಿನ ಕ್ರೀಡಾ ಸಚಿವರು ಆದೇಶಿಸಿರುವುದರಿಂದ ವಿಮಾನ ಏರಲಿದ್ದ ಕ್ರಿಕೆಟಿಗರು ಮರಳಿ ಮನೆಗೆ ವಾಪಸಾಗಿದ್ದಾರೆ. ಇದಕ್ಕೆ ಕಾರಣ ಕ್ರಿಕೆಟಿಗರ ಪ್ರದರ್ಶನದ ಬಗ್ಗೆ ಸಚಿವರು ತೀವ್ರ ಅಸಮಾಧಾನಗೊಂಡಿರುವುದು.

ಈ ವರ್ಷ ಒಟ್ಟು ಲಂಕಾ ತಂಡ 21 ಏಕದಿನ ಪಂದ್ಯವಾಡಿತ್ತು. ಆದರೆ ಕೇವಲ 4 ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಆಟಗಾರರ ಈ ನಿರಾಶಾದಾಯಕ ಪ್ರದರ್ಶನದಿಂದ ಬೇಸತ್ತ ಸಚಿವರು 9 ಕ್ರಿಕೆಟಿಗರ ಪ್ರವಾಸಕ್ಕೆ ಅನುಮತಿ ನಿರಾಕರಿಸಿದ್ದು, ಹೊಸದಾಗಿ ತಂಡ ಆಯ್ಕೆಯಾದ ಬಳಿಕ ಸಚಿವರ ಒಪ್ಪಿಗೆ ಸಿಕ್ಕಿದ ಮೇಲಷ್ಟೇ ಏಕದಿನ ತಂಡ ಭಾರತಕ್ಕೆ ಬರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ