ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಮಂಗಳಮುಖಿಗೆ ಲೈಂಗಿಕ ಕಿರುಕುಳ

ಮಂಗಳವಾರ, 19 ಡಿಸೆಂಬರ್ 2017 (16:34 IST)
ಮಂಗಳಿಮುಖಿಗೆ ಬೆಂಗಳೂರಿನ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.
 
ಬೆಂಗಳೂರಿನ ಆಸ್ಟೀನ್ ಟೌನ್‍ನಲ್ಲಿ ರಿಯಾನ ಎಂಬ ಮಂಗಳಮುಖಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
 
ಕೆಲವು ವೈಯಕ್ತಿಕ ಸಮಸ್ಯೆಗಳಿಂದ ಬಳಲುತ್ತಿದ್ದ ರಿಯಾನ ಸ್ಕಾನಿಂಗ್ ಮಾಡಿಸಲೆಂದು ಸ್ಕ್ಯಾನಿಂಗ್ ಸೆಂಟರ್ ಗೆ ಹೋಗಿದ್ದಾಗ ಸ್ಕ್ಯಾನಿಂಗ್ ಸೆಂಟರ್ ನ ಟೆಕ್ನಿಶಿಯನ್ ಮಹೇಂದ್ರ ಮೈಮೇಲಿದ್ದ ಬಟ್ಟೆಗಳನ್ನು ಸಂಪೂರ್ಣ ಕಳಚಿ ಮಲಗುವಂತೆ ಹೇಳಿದ್ದಾನೆ ಎನ‌್ನಲಾಗಿದೆ.

ಬಟ್ಟೆಗಳನ್ನು ಬಿಚ್ಚಲು ನಿರಾಕರಿಸಿರುವ ರಿಯಾನ ಇದೀಗ ಮಹೇಂದ್ರ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ