ಶಾಲಾ ಬಾಲಕಿಯನ್ನು ಚುಡಾಯಿಸಿದ ಯುವಕನಿಗೆ ಬುದ್ದಿ ಕಲಿಸಿದ ಗ್ರಾಮಸ್ಥರು
ಸಂಜೆ ಶಾಲೆಬಿಟ್ಟ ನಂತರ ಮನೆಗೆ ತೆರಳಿದ್ದ ಬಾಲಕಿಯನ್ನು ಆಟೋ ಹತ್ತುವಂತೆ ನಾಲ್ವರು ಯುವಕರು ಪೀಡಿಸಿರುವ ಘಟನೆ ಲಿಂಗದಹಳ್ಳಿಯಲ್ಲಿ ನಡೆದಿದೆ. ಇದನ್ನು ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ಯುವಕರು ಹಲ್ಲೆಗೆ ಮುಂದಾಗಿದ್ದಾರೆ.
ಗ್ರಾಮಸ್ಥರು ಕೂಡಿಕೊಂಡು ಯುವಕರನ್ನು ಹಿಡಿಯಲು ಮುಂದಾದಾಗ ಮೂವರು ಯುವಕರು ಪರಾರಿಯಾಗಿದ್ದಾರೆ. ಚಂದ್ರ ಎಂಬ ಯುವಕನೊಬ್ಬರ ಸಿಕ್ಕಿ ಬಿದ್ದಿದ್ದಾನೆ. ಆಗ ಗ್ರಾಮಸ್ಥರು ಯುವಕನನ್ನು ಥಳಿಸಿ ಮಂಗಳಾರತಿ ಮಾಡಿದ್ದಾರೆ.
ಘಟನೆಯ ಮಾಹಿತಿ ಪಡೆದ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.