ಬಸ್ ಪ್ರಯಾಣಿಕರಿಗೆ ತಟ್ಟಿದ ಶಕ್ತಿ ಯೋಜನೆ ಎಫೆಕ್ಟ್

ಗುರುವಾರ, 27 ಜುಲೈ 2023 (20:27 IST)
ಒಪ್ಪಂದದ ಮೇರೆಗೆ ಸಂಚಾರ ಮಾಡುವ ಸಾರಿಗೆ ನಿಗಮದ ಬಸ್ ಗಳ ದರ ಏರಿಕೆಯಾಗಲಿದೆ.ದರ ಪರಿಷ್ಕರಣೆ ಆದೇಶ ಕೆಎಸ್ಆರ್ಟಿಸಿ ಹೊರಡಿಸಿದೆ.ಶಕ್ತಿ ಯೋಜನೆಯಿಂದ ನಿತ್ಯ ಓಡಾಟದ ಬಸ್ ಗಳ ಬೇಡಿಕೆ ಹೆಚ್ಚಾದ ಹಿನ್ನೆಲೆ ಸದ್ಯ ದರ ಪರಿಷ್ಕರಣೆ ನಿಗಮ ಮಾಡಿದೆ.
 
ಹೊಸ ಆದೇಶದ ಪ್ರಕಾರ ಮೈಸೂರು ವ್ಯಾಪ್ತಿಯಲ್ಲಿ ಗಂಟೆ ಆಧಾರದಲ್ಲಿ ವಾಹನಗಳನ್ನ ಒದಗಿಸುವ ವ್ಯವಸ್ಥೆಯನ್ನ ನಿಗಮ ಕೈ ಬಿಟ್ಟಿದೆ.ಕರ್ನಾಟಕ ಸಾರಿಗೆ , ರಾಜಹಂಸ ಎಕ್ಸಿಕ್ಯೂಟಿವ್, ರಾಜಹಂಸ ಸೇರಿದಂತೆ 7 ವಿವಿಧ ರೀತಿಯ  ಒಪ್ಪಂದದ ಮೇರೆಗೆ ಸಂಚಾರ ಮಾಡುವ ಬಸ್ ಗಳ ದರ ಪರಿಷ್ಕರಣೆ ಮಾಡಲಾಗಿದೆ.ಪರಿಷ್ಕೃತ ದರ  ಆಗಸ್ಟ್ ಒಂದನೇ  ತಾರೀಖಿನಿಂದ ಜಾರಿಯಾಗಲಿದೆ.ಈ ಆದೇಶಕ್ಕೂ ಮುನ್ನ ಬುಕ್ಕಿಂಗ್ ಮಾಡಿರುವ ಒಪ್ಪಂದದ ಬಸ್ ಗಳಿಗೆ ಹಳೆಯ ದರ ಮುಂದುವರಿಕೆಯಾಗಲಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ