ಶಕ್ತಿ ಯೋಜನೆ ಟಿಕೆಟ್ ನೋಡಿ ಮಹಿಳೆಯರಿಗೆ ಶಾಕ್

ಬುಧವಾರ, 30 ಆಗಸ್ಟ್ 2023 (18:54 IST)
ಮಹಿಳೆಯರಿಗೆ ಶಕ್ತಿ ತುಂಬವ ನೆಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರವು ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಘೋಷಣೆ ಮಾಡಿತ್ತು. ಶಕ್ತಿ ಯೋಜನೆಗೆ ಮಹಿಳೆಯರಿಂದ ಎಲ್ಲೆಡೆ ಒಳ್ಳೆಯ ರೆಸ್ಪಾನ್ಸ್ ಸಿಕ್ರೆ, ಇನ್ನು ಹಲವರು ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಸರ್ಕಾರಿ ಬಸ್ ಗಳತ್ತ ಮುಖ ಮಾಡಿರುವುದರಿಂದ ಬಸ್ ಗಳ ಕೊರತೆಯಿಂದಾಗಿ ಬಸ್ ಗಳು ತುಂಬಿತುಳುಕುತ್ತವೆ. ಹೀಗಾಗಿ ವೃದ್ಧರು ಮಕ್ಕಳು ಸೇರಿದಂತೆ ಅನೇಕರಿಗೆ ಬಸ್ಗಳಲ್ಲಿ ಸೀಟ್ ಇಲ್ಲದೆ ಬಸ್ ನ ಡೋರ್ ಗಳಲ್ಲಿ ನೇತಾಡಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದ್ದು, ಶಕ್ತಿ ಯೋಜನೆ ಬಳಿಕ ಬಸ್ ನಿಂದ್ ಬಿದ್ದು ಹಲವರು ಮೃತಪಟ್ಟಂತಹ ಘಟನೆಗಳು ನಡೆದಿವೆ. ಹೀಗಾಗಿನೇ ಕಳೆದ ತಿಂಗಳು ಲಾ ಕಾಲೇಜ್ ವಿದ್ಯಾರ್ಥಿಗಳು ಶಕ್ತಿ ಯೋಜನೆಯನ್ನ ರದ್ದು ಮಾಡುವಂತೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದರು.

ಕೋವಿಡ್ ಬಳಿಕ ಶಕ್ತಿಗೆ ಯೋಜನೆಯಿಂದ ಸಾರಿಗೆ ಇಲಾಖೆಗೂ ಶಕ್ತಿ ಬಂದಂತಾಗಿದೆ. ಆದರೆ ಲಾ ಕಾಲೇಜ್ ವಿದ್ಯಾರ್ಥಿಗಳು ಶಕ್ತಿ ಯೋಜನೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ರು, ಇದರ ಬೆನ್ನಲೆ ಶಕ್ತಿ ಯೋಜನೆಗೆ ಬ್ರೇಕ್ ಬೀಳಲಿದೆ ಎಂಬ ಗಾಳಿ ಸುದ್ದಿ ಕೇಳಿಬಂದಿತ್ತು. ಇನ್ನು ಈ ಬಗ್ಗೆ ಮಹಿಳೆಯರು ಕೂಡ ಸಾಕಷ್ಟು ಗೊಂದಲಕೀಡಾಗಿದ್ರು, ಇದರ ಬಗ್ಗೆ ಕುಡ್ದು ಸಿಎಂ ಸಿದ್ದರಾಮಯ್ಯ, ಹಾಗೂ ಡಿಸಿಎಂ ಡಿಕೆ ಶಿವಕುಮಾರ್, ಪ್ರತಿಕ್ರಿಯೆ ನೀಡಿದ್ದು ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ ಎಂದು ಹೇಳುವ ಮೂಲಕ ಎಲ್ಲಾ ಗೊಂದಲಗಳಿಗೂ ತೇರೆ ಎಳೆದಿದ್ದರು. ಆದರೆ ಇದೀಗ ಶಕ್ತಿ ಯೋಜನೆಗೆ ಮತ್ತೆ ಕಂಟಕ ಎದುರಾಗಿದ್ದು, ಕಳೆದ ತಿಂಗಳು ಲಾ ಕಾಲೇಜ್ ವಿದ್ಯಾರ್ಥಿಗಳು ಶಕ್ತಿ ಯೋಜನೆ ನಿಲ್ಲಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು  ಇದೆ ಸಪ್ಟಂಬರ್ 9ರಂದು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಇನ್ನೂ ಸಾರಿಗೆ ಇಲಾಖೆ 9 ನೇ ತಾರೀಕಿಗೆ ಹೈಕೋರ್ಟ್ ನಲ್ಲಿ ನಡೆಯುವ ವಿಚಾರದ ಬಗ್ಗೆ ಪ್ರಯಾಣಿಕರಿಗೆ ನೀಡುವ ಟಿಕೆಟ್ಗಳ ಮೇಲೆ ಪ್ರಿಂಟ್ ಹಾಕಿದ್ದು ಪ್ರಯಾಣಿಕರಲ್ಲಿ ಸಾಕಷ್ಟು ಗೊಂದಲ ಎಡೆಮಾಡಿದೆ. ಇನ್ನು ಟಿಕೆಟ್ ಮೇಲೆ ಏನು ಬರೆದಿದ್ದಾರೆ ಅಂತ ನೋಡೋದಾದ್ರೆ ಸಪ್ಟಂಬರ್ 9ನೇ ತಾರೀಕಿಗೆ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ವ್ಯಾಜ್ಯ ಇತ್ಯಾರ್ಥ ಪಡಿಸಿಕೊಳ್ಳಿ’  ಎಂಬ ಬರವಣಿಗೆ ಬರೆಯುವ ಮೂಲಕ ಸಾರಿಗೆ ಇಲಾಖೆ ಪ್ರಯಾಣಿಕರಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ