AICC ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ ಮತ್ತು ಮಲ್ಲಿಕಾರ್ಜುನ್ ಖರ್ಗೆ ಸ್ಪರ್ಧೆ - ಡಿಕೆಶಿ

ಮಂಗಳವಾರ, 11 ಅಕ್ಟೋಬರ್ 2022 (21:14 IST)
ಪ್ರತಿ ದಿನವೂ 6 ಗಂಟೆಗೆ ನಮ್ಮ ಪಾದಯಾತ್ರೆ ಆರಂಭವಾಗುತ್ತಿತ್ತು.ಮಳೆ ಇರುವ ಕಾರಣ ಇದು ಸ್ವಲ್ಪ ತಡವಾಗಿದೆ.ನಿನ್ನೆಯ ಎಲ್ಲಾ ಬೆಳವಣಿಗೆ ನಾನು ನೋಡ್ದೆ.ಮುಲಾಯಂ ಸಿಂಗ್ ಯಾದವ್ ಅವರ ಅಂತ್ಯಕ್ರಿಯೆಯಲ್ಲಿ  ರಾಹುಲ್ ಗಾಂಧಿ ಭಾಗಿಯಾಗದ  ಕುರಿತು  ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಸಿದ್ದಾರೆ.ರಾಹುಲ್ ಗಾಂಧಿಯವರು ಭಾಗಿಯಾಗಬೇಕು ಎಂದು ಒತ್ತಡ ಇತ್ತು.ಕೊನೆಗೆ ಸೋನಿಯಾ ಗಾಂಧಿ & ಪ್ರೀಯಾಂಕ ಗಾಂಧಿ  ಮನವಿ ಮಾಡಲಾಯಿತು.ಹೀಗಾಗಿ ಪ್ರೀಯಾಂಕ ಗಾಂಧಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುತ್ತಾರೆ.ಯಾತ್ರೆ ವೇಳೆ ಮುಲಾಯಂ ಸಿಂಗ್ ಯಾದವ್ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಪಾತ್ರ ವಹಿಸಿದ್ದವರು  ಮುಲಾಯಂ ಸಿಂಗ್.ಇದೇ 15 ರಂದು ಬಳ್ಳಾರಿಯಲ್ಲಿ ದೊಡ್ಡ ಸಭೆ ಕೂಡಾ ನಡೆಯುತ್ತದೆ.ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ವಿಚಾರ ,ಯಾತ್ರಿಗಳಿಗೆ ಮತದಾನ ನಡೆಯುತ್ತಿದ್ದು, ಅಲ್ಲೇ ಮತ ಹಾಕಲು ಬೂತ್ ಮಾಡುತ್ತೇವೆ.AICC ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ & ಮಲ್ಲಿಕಾರ್ಜುನ್ ಖರ್ಗೆ ಸ್ಪರ್ಧೆ ಮಾಡಿದ್ದಾರೆ.PCC ಸದಸ್ಯರಾಗಿದ್ದಾರೆ. ಅವರು ಬೆಂಗಳೂರಿನ KPCC ಕಚೇರಿಯಲ್ಲಿ ಮತದಾನ ಮಾಡುತ್ತಾರೆ ಎಂದು ಚಿತ್ರದುರ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಇನ್ನೂ ಇದೇ ವೇಳೆ ರಾಯಚೂರು ಬಿಜೆಪಿ ಸಮಾವೇಶ ‌ವಿಚಾರಕ್ಕೆ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.ಬಿಜೆಪಿ ಈಗ ಜನ ಸಂಕಲ್ಪ ಮಾಡುತ್ತಿದೆ, ಇಷ್ಟು ದಿನ ಸಂಕಲ್ಪ ಮಾಡಿರಲಿಲ್ಲ.3 ವರ್ಷದಿಂದ ಜನ ಸ್ಪಂದನದ ಬಳಿಕ ಸಂಕಲ್ಪವಾಗಿದೆ.ಅಧಿಕಾರ ಇದ್ದಾಗ ಸ್ಪಂದನ & ಸಂಕಲ್ಪ ಮಾಡಬಹುದು.ಈಗ ಜನ ಹತ್ತಿರ ಹೋಗಲು ಹೋರಟಿದ್ದಾರೆ ಎಂದು ಬಿಜೆಪಿ ವಿರುದ್ಧ ಡಿಕೆಶಿ ಕಿಡಿಕಾರಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ