ಜಯಾ ಸಮಾಧಿಗೆ ಮೂರು ಬಾರಿ ರೋಷದಿಂದ ತಟ್ಟಿ ಪ್ರತಿಜ್ಞೆಗೈದ ಶಶಿಕಲಾ

ಬುಧವಾರ, 15 ಫೆಬ್ರವರಿ 2017 (12:24 IST)
ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ನಟರಾಜನ್ ಬೆಂಗಳೂರಿಗೆ ತೆರಳುವ ಮುನ್ನ ದಿವಂಗತ ಮಾಜಿ ಸಿಎಂ ಜೆ.ಜಯಲಲಿತಾ ಸಮಾಧಿಗೆ ಭೇಟಿ ನೀಡಿ ಸಮಾಧಿಯನ್ನು ಮೂರು ಬಾರಿ ರೋಷದಿಂದ ತಟ್ಟಿ ಪ್ರತಿಜ್ಞೆಗೈದಿದ್ದಾರೆ.
 
ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಗೆ ಹೋಗುವ ಮುನ್ನ ಶಶಿಕಲಾ, ಚೆನ್ನೈನ ಮರೀನಾ ಬೀಚ್‌ನಲ್ಲಿ ಜಯಲಲಿತಾ ಸಮಾಧಿಗೆ ತಲೆಬಾಗಿ ನಮಿಸಿದ್ದಾರೆ. ಆದರೆ, ಮನಸ್ಸಲ್ಲೆ ಮಾತಾಡಿಕೊಂಡು ಸಮಾದಿ ಮೇಲೆ ಮೂರು ಬಾರಿ ಪ್ರತಿಜ್ಞೆ ಮಾಡುವ ರೀತಿಯಲ್ಲಿ ತುಂಬಾನೇ ರೋಷದಿಂದ ಕೈ ತಟ್ಟಿರುವುದು ಜನತೆಗೆ ಅಚ್ಚರಿ ಉಂಟು ಮಾಡಿದೆ.
 
ಶಶಿಕಲಾ ಜೊತೆಯಲ್ಲಿರುವ ಸುಧಾಕರ್ ಮತ್ತು ಇಳರಿಸಿ ಕೂಡಾ ಜಯಲಲಿತಾ ಸಮಾಧಿಗೆ ನಮಿಸಿ, ನಂತರ ಬೆಂಗಳೂರಿಗೆ ತೆರಳಿದ್ದಾರೆ.
 
ನಿನ್ನೆ ಬೆಳಿಗ್ಗೆ ಸುಪ್ರೀಂಕೋರ್ಟ್ ಅಕ್ರಮ ಆಸ್ತಿ ಪ್ರಕರಣದಲ್ಲಿ ಶಶಿಕಲಾ, ಶಶಿಕಲಾ ಪುತ್ರ ನಟರಾಜನ್ ಮತ್ತು ಶಶಿಕಲಾ ಅತ್ತಿಗೆ ಇಳವರಿಸಿಯವನ್ನು ಅಪರಾಧಿಗಳು ಎಂದು ಘೋಷಿಸಿ, ತಕ್ಷಣದಿಂದಲೇ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಶರಣಾಗುವಂತೆ ಆದೇಶ ನೀಡಿತ್ತು.
 
ಒಂದು ತಿಂಗಳುಗಳ ಕಾಲಾವಕಾಶ ನೀಡುವಂತೆ ಕೋರಿ ಶಶಿಕಲಾ, ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದರಿಂದ ಶಶಿಕಲಾ ಮತ್ತು ಆಕೆಯ ಸಹಚರರು ಇಂದು ಪರಪ್ಪನ ಅಗ್ರಹಾರ ಜೈಲು ಸೇರಬೇಕಾದ ಅನಿವಾರ್ಯತೆ ಎದುರಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ