ಶೀಲಹಳ್ಳಿ ಸೇತುವೆ ಮುಳುಗಡೆ

ಶುಕ್ರವಾರ, 23 ಜುಲೈ 2021 (19:02 IST)
ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಭೀತಿ ಶುರುವಾಗಿದ್ದು, ಶೀಲಹಳ್ಳಿ‌ ಬ್ರಿಡ್ಜ್ ಮುಳಗಡೆಯಾಗಿದೆ. ನಾರಾಯಣಪುರ(ಬಸವಸಾಗರ) ಜಲಾಶಯದಿಂದ ಹೆಚ್ಚುವರಿ ಲಕ್ಷಾಂತರ ಕ್ಯೂಸೆಕ್ಸ್ ನೀರನ್ನ ಕೃಷ್ಣ ನದಿಗೆ ಹರಿದು ಬೀಡಲಾಗಿದೆ. ಇಂದು ಜಲಾಶಯದಿಂದ ೨೯ ಕ್ರಾಸ್ ಗಳಿಂದ ೧.೯೮ ಲಕ್ಷ ಕ್ಯೂಸೆಕ್ಸ್ ನೀರಿನ್ನ ನದಿಗೆ ಹರಿದು ಬಿಡಲಾಗಿದೆ. ಇದರಿಂದಾಗಿ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ ಬ್ರಿಡ್ಜ್ ಜಲಾವೃತ್ತಗೊಂಡು ಸಂಚಾರ ಸ್ಥಗೀತವಾಗಿದ್ದು, ನಾನಾ ನಡುಗಡ್ಡೆ ಪ್ರದೇಶಗಳಿಗೆ ಸಂಪರ್ಕ ಕಡಿತವಾಗಿದೆ. 
ನಡುಗಡ್ಡೆ ಗ್ರಾಮಗಳಾದ ಕಡದರಗಡ್ಡಿ, ಯರಗೋಡಿ, ಯಳಗುಂದಿ, ಹಂಚಿನಾಳ ಸೇರಿದಂತೆ ನಡುಗಡ್ಡೆ ಪ್ರದೇಶಗಳ ನಿವಾಸಿಗಳಿಗೆ ಜನತೆ ಬಾಹ್ಯ ಸಂಪರ್ಕ ಕಳೆದುಕೊಂಡಿದ್ದಾರೆ. ಕೃಷಿ ಚಟುವಟಿಕೆ, ತೋಟಗಾರಿಕೆ ಕೆಲಸಕ್ಕೆ ಹೋಗುವ ಕೂಲಿಕಾರ್ಮಿಕರು ಸೇತುವೆ ಮುಳುಗಡೆ ಆಗಿದ್ದರಿಂದ ಮನೆಯತ್ತ ವಾಪಸ್ ತೆರಳಿದರು. ಮುಂಜಾಗ್ರತ ಕ್ರಮವಾಗಿ ಪೊಲೀಸ್ ಇಲಾಖೆ  ಸೇತುವೆ ಬಳಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿ, ಸಂಚಾರವನ್ನ ಬಂದ್ ಗೊಳಿಸಲಾಗಿದೆ. ಕೃಷ್ಣಾ ನದಿ ತೀರದಲ್ಲಿ ಬರುವ ಜಿಲ್ಲೆಯ ಲಿಂಗಸೂಗೂರು, ದೇವದುರ್ಗ, ರಾಯಚೂರು ತಾಲೂಕಿನ ಗ್ರಾಮಗಳಿಗೆ ನದಿಯ ತೀರಕ್ಕೆ ಜನ-ಜಾನುವಾರು ತೆರಳದಂತೆ ಜಿಲ್ಲಾಡಳಿತ ಸಂದೇಶ ನಡೆಸಿದ್ದು, ‌ಪ್ರವಾಹವನ್ನು‌ ನಿಭಾಯಿಸಲು ಅಧಿಕಾರಿಗಳನ್ನ‌, ಸಿಬ್ಬಂದಿಗಳು ನಿಯೋಜನೆ ಮಾಡಲಾಗಿದೆ. ಸದ್ಯ ೧.೯೮ ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟಿದ್ದು, ಇನ್ನೂ ಹೆಚ್ಚಳವಾದರೆ ದೇವದುರ್ಗ ತಾಲೂಕಿನ ಹೂವಿನಹೆಡಗಿ ಬ್ರಿಡ್ಜ್ ಮುಳುಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ