ಶೆಲ್‌ ಇಂಡಿಯಾ, ಅದರ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ, ಈಗ ಮತ್ತೊಂದು ಹಂತದ ಅಭಿಯಾನ

ಶುಕ್ರವಾರ, 15 ಅಕ್ಟೋಬರ್ 2021 (21:55 IST)
ಎರಡು ವರ್ಷಗಳ ಹಿಂದೆ ದೇಶಾದ್ಯಂತ ಸುರಕ್ಷಿತ ಚಾಲನೆಗಾಗಿ ಅಭಿಯಾನ ಆರಂಭಿಸಿದ್ದ ಶೆಲ್‌ ಇಂಡಿಯಾ, ಅದರ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ, ಈಗ ಮತ್ತೊಂದು ಹಂತದ ಅಭಿಯಾನ ಆರಂಭಿಸಿದೆ. ಇದಕ್ಕಾಗಿ ಶೆಲ್‌ ಇಂಡಿಯಾ, ವಿಷನ್‌ ಇನ್‌ಸ್ಟಿಟ್ಯೂಟ್‌ (ಐವಿಐ)ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. 
ಶೆಲ್‌ ಇಂಡಿಯಾ, 2019ರ ಫೆಬ್ರವರಿಯಲ್ಲಿ ಆರಂಭಿಸಿದ್ದ ಕಾರ್ಯಕ್ರಮಕ್ಕೆ ದೇಶಾದ್ಯಂತ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯೋಜನೆಯಡಿ 2.6 ಲಕ್ಷ ಚಾಲಕರ ತಪಾಸಣೆ ನಡೆಸಿದ್ದು, ಸುಮಾರು 1.75 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಿಸಲಾಗಿದೆ. 2019ನೇ ಸಾಲಿನ ರಸ್ತೆ
ಸುರಕ್ಷತೆಯ ಕೊಡುಗೆಗಾಗಿ ಈ ಕಾರ್ಯಕ್ರಮಕ್ಕೆ ಕೋವೆಟೆಡ್‌ ಪ್ರಿನ್ಸ್‌ ಮೈಕೆಲ್‌ ಇಂಟರ್‌ನ್ಯಾಷನಲ್‌ ರೋಡ್‌ ಸೇಫ್ಟಿ ಪ್ರಶಸ್ತಿ ಕೂಡ ಲಭಿಸಿದೆ.
ಶೆಲ್ ಈಗ ಮತ್ತೊಂದು ಪಾಲುದಾರರೊಂದಿಗೆ ಕೈಜೋಡಿಸಿದೆ. ಇಂಡಿಯಾ ವಿಷನ್ ಇನ್‌ಸ್ಟಿಟ್ಯೂಟ್ (ಭಾರತದ ದೂರದ ಭಾಗಗಳಲ್ಲಿ ಹಿಂದುಳಿದವರಿಗೆ ಉಚಿತ ನೇತ್ರ  ತಪಾಸಣೆ ಮತ್ತು ಕನ್ನಡಕ ಒದಗಿಸುವ ಸ್ವಯಂ ಸೇವಾಸಂಸ್ಥೆ) ಈ ಉಪಕ್ರಮದ ಹೊಸ ಭಾಗವಾಗಿರಲಿದ್ದು,  ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ದೃಷ್ಟಿ ಪರೀಕ್ಷಾ ಶಿಬಿರಗಳನ್ನು ವಿಸ್ತರಿಸುವ ಗುರಿ ಹೊಂದಿದೆ. 
ಈ ಬಗ್ಗೆ ಮಾತನಾಡಿದ ಶೆಲ್‌ ಇಂಡಿಯಾ ಮೊಬಿಲಿಟಿಯ ನಿರ್ದೇಶಕ ಸಂಜಯ್‌ ವಾರ್ಕೆ, ಶೆಲ್‌ನಲ್ಲಿ ನಾವು ಎಲ್ಲರ ರಸ್ತೆ ಸುರಕ್ಷತೆ ಅತ್ಯಗತ್ಯ ಎಂಬುದನ್ನು ನಂಬುತ್ತೇವೆ ಮತ್ತು ಈ ನಿಟ್ಟಿನಲ್ಲಿ ಸರಿಯಾದ ಹೆಜ್ಜೆಯಾಗಿದೆ. ದೇಶದ 3 ಅತಿ ಹೆಚ್ಚು ಅಪಘಾತ ವರದಿಯಾಗುವ ರಾಜ್ಯಗಳಲ್ಲಿ ತಮಿಳುನಾಡು ಮತ್ತು ಕರ್ನಾಟಕ ಕೂಡ ಸೇರಿವೆ. ಈ ಕಾರ್ಯಕ್ರಮದ ಮೂಲಕ ನಾವು ಚಾಲಕರ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣೆಯಿಂದ ಸುರಕ್ಷಿತ ಚಾಲನೆ ಹಾಗೂ ಅಪಘಾತ ಪ್ರಮಾಣ ಕಡಿಮೆಗೊಳಿಸಲು ಕೊಡುಗೆ ನೀಡುತ್ತಿದ್ದೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ