ಜಿಲ್ಲಾಧಿಕಾರಿ ಪತ್ನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ
ಕೊರೊನಾ ಮಧ್ಯೆಯೂ ಐಶಾರಾಮಿ ಸವಲತ್ತುಗಳನ್ನು ಬದಿಗೆ ತಳ್ಳಿ ಪತ್ನಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ಮೂಲಕ ಜಿಲ್ಲಾಧಿಕಾರಿಯೊಬ್ಬರು ಸರಳತೆ ಮೆರೆದಿದ್ದಾರೆ.
ಸರ್ಕಾರಿ ಆಸ್ಪತ್ರೆ ಎಂದ್ರೆ ಮೂಗು ಮುರಿಯುವ ಜನರಿಗೆ, ಸರಕಾರಿ ವೈದ್ಯರ ಮೇಲೆ ನಂಬಿಕೆ ಇಟ್ಟು ತಮ್ಮ ಪತ್ನಿಗೆ ಹೆರಿಗೆ ಮಾಡಿಸಿದ ಡಿಸಿ ನಡೆ ಇತರರಿಗೆ ಮಾದರಿಯಾಗಿದೆ. ಸರಳತೆ ಮೆರೆದ ಡಿಸಿ ನಡೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.