ವಿಕಲಚೇತನ ಲೆಕ್ಕಿಸದೇ SSLC ಪರೀಕ್ಷೆ ಬರೆಯುವವರಿಗೆ ಮಾಸ್ಕ್ ಹೊಲಿದ ಪೋರಿ
ಕೊರೊನಾ ಹಿನ್ನೆಲೆ ಇದೀಗ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಮಾಸ್ಕ್ ಹೊಲಿದು ಕೊಡುವ ಮೂಲಕ ಬೆಂಬಲ ನೀಡಿ ಪುಟ್ಟ ಬಾಲಕಿ ಸುದ್ದಿಯಾಗಿದ್ದಾಳೆ.
ಕಲ್ಯಾಣ ಪುರದ ಮೌಂಟ್ ರೋಸರಿ ಶಾಲೆಯಲ್ಲಿ 6 ನೇ ತರಗತಿ ಓದುತ್ತಿದ್ದಾಳೆ ಈ ಬಾಲೆ. ಶಾಲೆಯಲ್ಲಿ ಬುಲ್ ಬುಲ್ ತಂಡದ ಸಕ್ರಿಯೆ ಸದಸ್ಯೆ ಆಗಿರುವ ಸಿಂಧೂರಿ ಓದಿನಲ್ಲೂ ಮುಂದಿದ್ದಾರೆ. ಹುಟ್ಟಿನಿಂದಲೇ ಎಡಗೈ ಬೆಳವಣಿಗೆ ಇಲ್ಲದೇ ಆದ್ರೆ ಬಲಗೈ ಸಹಜವಾಗಿದ್ದು, ಒಂದೇ ಕೈಬಳಸಿ ಮಾಸ್ಕ್ ತಯಾರಿಸಿ ಶಾಲೆಯ ಶಿಕ್ಷಕರಿಂದ ಮಾತ್ರವಲ್ಲದೇ ಸ್ವತಃ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಂದಲೂ ಶಹಬ್ಬಾಸ್ ಎನಿಸಿಕೊಂಡಿದ್ದಾಳೆ.
ತಾಯಿಯಿಂದ ಹೊಲಿಗೆ ಕಲಿತ ಬಾಲಕಿ, ಇದೀಗ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಸ್ವತಃ ಸಿಂಧೂರಿಯೇ ಮಾಸ್ಕ್ ಹೊಲಿದಿದ್ದಾಳೆ.