ಮಂಗಳೂರು: ವಿಪರೀತ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಬೆಂಗಳೂರು ಮತ್ತು ಮಂಗಳೂರು ನಡುವಿನ ಸಂಪರ್ಕ ರಸ್ತೆ ಬಂದ್ ಆಗಿದೆ.
ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿದ ಪರಿಣಾಮ ರಸ್ತೆ ಬಂದ್ ಮಾಡಲು ಡಿಸಿ ಶಶಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ. ಇಲ್ಲಿ ನಿನ್ನೆ ರಾತ್ರಿ ಮಣ್ಣು ತೆರವುಗೊಳಿಸಲಾಗಿತ್ತು. ಈಗ ಮತ್ತೆ ಗುಡ್ಡ ಕುಸಿದ ಪರಿಣಾಮ ತೆರವು ಕಾರ್ಯಾಚರಣೆ ನಡೆಯುವವರೆಗೆ ರಸ್ತೆ ಬಂದ್ ಮಾಡಲು ಡಿಸಿ ಆದೇಶಿಸಿದ್ದಾರೆ. ಇದರಿಂದಾಗಿ ಮಡಿಕೇರಿ, ಸಂಪಾಜೆ, ಶಿರಾಡಿ ಘಾಟ್ ಮೂಲಕ ಮಂಗಳೂರಿಗೆ ಸಂಪರ್ಕ ರದ್ದಾಗಿದೆ.
ಇನ್ನು ಮಂಗಳೂರಿಗೆ ತೆರಳುವ ಪ್ರಯಾಣಿಕರು ಚಾರ್ಮಾಡಿ ಘಾಟ್ ಸಾಗಬೇಕಿದೆ. ಶಿರಾಡಿ ಘಾಟಿ ಬಂದ್ ಆಗಿದ್ದ ಸಂದರ್ಭದಲ್ಲಿ ಚಾರ್ಮಾಡಿ ಘಾಟಿ ಮೂಲಕವೇ ಮಂಗಳೂರಿಗೆ ವಾಹನ ಸಂಚರಿಸುತ್ತಿತ್ತು. ಇತ್ತೀಚೆಗಷ್ಟೇ ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತವಾಗಿತ್ತು. ಆದರೆ ಮಳೆಯಿಂದಾಗಿ ಮತ್ತೆ ಈ ರಸ್ತೆ ಬಂದ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.