ದ.ಕ. ಜಿಲ್ಲೆಯ ಶಾಲಾ ಮಕ್ಕಳಿಗೆ ರಜವೋ ರಜ
ಇಂದೂ ಕೂಡಾ ಭಾರೀ ಮಳೆಯಿಂದಾಗಿ ಶಾಲಾ ಕಾಲೇಜುಗಳಿಗೆ ಡಿಸಿ ರಜೆ ಘೋಷಣೆ ಮಾಡಿದ್ದಾರೆ. ಶನಿವಾರವೂ ಮಳೆಯ ಕಾರಣಕ್ಕೆ ರಜೆಯಿತ್ತು. ಹೀಗಾಗಿ ಈ ವಾರಂತ್ಯದಲ್ಲಿ ರಜೆಯೋ ರಜೆ. ಶಾಲೆ ಶುರುವಾಗಿ ಎರಡು ತಿಂಗಳು ಕಳೆದಿದ್ದರೂ ಒಟ್ಟು ಒಂದು ವಾರಕ್ಕೂ ಹೆಚ್ಚು ಕಾಲ ಮಳೆಗಾಗಿ ಈ ವರ್ಷ ರಜೆ ನೀಡಲಾಗಿದೆ.
ಇನ್ನು ಕೇರಳದಲ್ಲಿ ಭಾರೀ ಅನಾಹುತ ಸೃಷ್ಟಿಸಿರುವ ಮಳೆ, ದ.ಕನ್ನಡ ಜಿಲ್ಲೆ, ಕರಾವಳಿ ಜಿಲ್ಲೆಗೂ ಕಾಲಿಟ್ಟಿದ್ದು, ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗೇ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಸಂಷಕ್ಟಕ್ಕೀಡಾಗಲಿದೆ.