ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಶಿವರಾಜ್ ತಂಗಡಗಿ
ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ವಿಚಾರವಾಗಿ ವಿಕಾಸಸೌಧದಲ್ಲಿ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದು,ಆಪರೇಷನ್ ಎಲ್ಲ ಮುಗಿದ ಅಧ್ಯಾಯ.ಈ ಬಾರಿ ಹೆಂಗೆ ಆಪರೇಷನ್ ಆಗುತ್ತೆ ಅಂದ್ರೆ ಬಿಜೆಪಿಯ ಹೊಟ್ಟೆಯಲ್ಲಿ ಆಪರೇಷನ್ ಕತ್ತರಿ ಹೊಲಿದಕೊಳ್ಳುತ್ತಾರೆ.ಬಿಜೆಪಿಯವರು ಎಷ್ಟು ಕೋಟಿ ಆಫರ್ ಮಾಡಿದ್ರು.ಅದನ್ನ ಸರ್ಕಾರ ಸೇಪ್ ಮಾಡುತ್ತೆ.
ಬಿಜೆಪಿಯವರಿಗೆ ಅಭ್ಯಾಸ ಇದೆ ಶೇಕ್ ಮಾಡೋಕೆ.ದೇಶದಲ್ಲಿ ಎಂಪಿಗಳು ಮಾತ್ರ ಹೆಚ್ಚು ಇರೋದು.ಬಿಜೆಪಿಗೆ ಎರಡು ಬಾರಿ ಪೂರ್ವ ಪ್ರಮಾಣದ ಬಹುಮತ ಬಂದಿಲ್ಲ.ಆದ್ರು ಎರಡು ಬಾರಿ ಸರ್ಕಾರ ಮಾಡಿದ್ದಾರೆ.ಒಂದು ಬಾರಿ ನಾವೇ ಸಹಾಯ ಮಾಡಿದ್ವಿ.ಸಹಾಯ ಮಾಡಿದವರನ್ನ ನಡು ದಾರಿಯಲ್ಲಿ ಬಿಡ್ತಾರೆ.ನಂಬಿದವನ್ನ ಕೈಬಿಡುವುದು ಬಿಜೆಪಿಯ ಪ್ರವೃತ್ತಿ ಗುಣಗಳು.ಯಾವ ಆರೋಗ್ಯ ಕಡೆವುದಿಲ್ಲ, ನಮ್ಮ ಆರೋಗ್ಯ ಚನ್ನಾಗಿದೆ.135 ಸ್ಥಾನ ಗೆದ್ದಿದ್ದೇವೆ,ಶಕ್ತಿಯುತ ಸರ್ಕಾರ ಇದೆ.ಜನರ ದಾರಿ ತಪ್ಪಿಸಲು ಹೇಳಿಕೆ ಕೊಡ್ತಾರೆ ಅದರ ಬಗ್ಗೆ ತೆಲೆಕೆಡಿಸಿಕೊಳ್ಳಬಾರದು ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.