ಪಾಕ್ ಗೆ ಶಾಕ್ ಮೇಲೆ ಶಾಕ್ : ಜಲಾಸ್ತ್ರ ಪ್ರಯೋಗಿಸಿದ ಭಾರತ

ಬುಧವಾರ, 21 ಆಗಸ್ಟ್ 2019 (16:14 IST)
ಈಗಾಗಲೇ ಶೇಕಡಾ 200 ಆಮದು ಸುಂಕ ವಿಧಿಸಿ ಪಾಕ್ ನಲ್ಲಿ ಅಗತ್ಯ ವಸ್ತುಗಳ ಬೆಲೆಯಿಂದ ಅಲ್ಲಿನ ಜನರು ತತ್ತರಗೊಳ್ಳುವಂತೆ ಮಾಡುವಲ್ಲಿ ಯಶ ಸಾಧಿಸಿರೋ ಭಾರತವು ಇದೀಗ ಜಲಾಸ್ತ್ರ ಪ್ರಯೋಗ ಮಾಡಿ ಶಾಕ್ ಮೇಲೆ ಶಾಕ್ ನೀಡುತ್ತಿದೆ.

ನೆರೆಯ ಪಾಕಿಸ್ತಾನಕ್ಕೆ ಹರಿಯುತ್ತಿರೋ ನದಿಗಳ ನೀರನ್ನು ತಡೆ ಹಿಡಿಯುವ ಕಾರ್ಯ ನಡೆಯುತ್ತಿದೆ. ಆಣೆಕಟ್ಟು ನಿರ್ಮಾಣ ಮೂಲಕ ಮಳೆ ಇಲ್ಲದ ಸಂದರ್ಭದಲ್ಲಿ ಕಾಲುವೆ ಮೂಲಕ ಪಂಜಾಬ್, ಹರಿಯಾಣ ಮೊದಲಾದೆಡೆ ಹರಿಸಲು ಕಾಮಗಾರಿ ಆರಂಭಗೊಂಡಿದೆ.

ಹೀಗಂತ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕೇಂದ್ರ ಸಚಿವರಾಗಿದ್ದ ನಿತಿನ್ ಗಡ್ಕರಿ ಕೂಡಾ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ಈ ಕುರಿತು ನೀಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ