ಯುಗಾದಿ ಹಬ್ಬಕ್ಕೆ ಊರಿಗೆ ಹೋಗೋರಿಗೆ ಶಾಕ್

ಗುರುವಾರ, 31 ಮಾರ್ಚ್ 2022 (19:44 IST)
ಈ ಹಬ್ಬಗಳು ಬಂದ್ರೆ ಸಾಕು ಖಾಸಗಿ ಬಸ್ಸುಗಳು ಮನಬಂದಂತೆ ಬಸ್ ಚಾರ್ಚ್ ವಿಧಿಸುವುದಲ್ಲದೇ, ಸೀಟ್ ಕೆಪಾಸಿಟಿ ಮೀರಿಯು ಜನರು ಕೂರಿಸುಸ್ತಾರೆ.‌ ಹೀಗಾಗಿ ಇವರನ್ನ ಕಂಟ್ರೋಲ್ ಮಾಡುವ ಸಲುವಾಗಿಯೇ ಸಾರಿಗೆ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಬೇರೆ ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದು ಬದುಕುಕಟ್ಟಿಕೊಂಡ ಎಷ್ಟೋ ಜನ ಹಬ್ಬ ಹರಿದಿನ ಬಂತಂದ್ರೆ ಸಾಕು ಊರ ಕಡೆ ಮುಖ ಮಾಡ್ತಾರೆ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡಿರೋ ಖಾಸಗಿ ಬಸ್ ಮಾಲೀಕರು ಮನಬಂದಂತೆ ಟಿಕೆಟ್ ದರ ನಿಗದಿ ಮಾಡ್ತಿದ್ದಾರೆ. ಹೀಗಾಗಿ ಗ್ರಾಹಕರಿಗೆ ತೊಂದರೆ ಆಗಬಾರ್ದು ಅಂತ ಸಾರಿಗೆ ಇಲಾಖೆ ಹೊಸ ಪ್ಲ್ಯಾನ್ ಮಾಡಿದೆ.
 
ಪ್ರತಿ ಖಾಸಗಿ ಬಸ್ ನಿಲ್ದಾಣದಲ್ಲೂ ಸಾರಿಗೆ ಇಲಾಖೆಯಿಂದ ಸ್ಕ್ವಾಡ್​ಗಳ ನೇಮಕ ಮಾಡಲಾಗ್ತಿದೆ.‌ ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ‌ರೇಸ್ ಕೋರ್ಸ್, ಕಲಾಸಿಪಾಳ್ಯ, ದೇವನಹಳ್ಳಿ, ‌ಸಿಲ್ಕ್ ಬೋರ್ಡ್, ಹೊಸೂರ್ ರೋಡ್, ಹೊಸಕೋಟೆ, ಗೊರಗುಂಟೆಪಾಳ್ಯ ಸೇರಿ ಪ್ರಮುಖ ನಿಲ್ದಾಣಗಳಲ್ಲಿ ಅಧಿಕಾರಿಗಳು ಇರಲಿದ್ದಾರೆ. ಸೀಟ್ ಲಿಮಿಟ್​ನಷ್ಟೇ ಪ್ರಯಾಣಿಕರು ಇಲ್ಲದೇ ಇದ್ರೆ, ಲಗೇಜ್ ಸ್ಟ್ಯಾಂಡ್​ಗಳಲ್ಲಿ ಪ್ರಯಾಣಿಕರನ್ನ ಕೂರಿಸಿದ್ರೆ 1000 ದಿಂದ 5000 ರೂಪಾಯಿಗಳವರೆಗೆ ತನಕ ದಂಡ ವಿಧಿಸಲು ಸಾರಿಗೆ ಇಲಾಖೆ ಸಜ್ಜಾಗಿದೆ.ಇನ್ನು, ಈಗಾಗಲೇ ಹಬ್ಬಗಳಿಗೆ ಊರಿಗೆ ಹೋಗಲು ಪ್ರಯಾಣಿಕರು ಟಿಕೆಟ್​ಗಳನ್ನ ಬುಕ್ ಮಾಡಿಕೊಂಡಿದ್ದು, ಅದ್ರಲ್ಲಿ ಟಿಕೆಟ್ ದರ 150 ರಿಂದ 250 ರೂಪಾಯಿವರೆಗೆ ಏರಿಕೆಯಾಗಿದೆಯಂತೆ. ಈ‌ ಕುರಿತು ಟ್ರಾವೆಲ್ಸ್ ಮಾಲೀಕರನ್ನ ಕೇಳಿದ್ರೆ ಕೊರೊನಾದಿಂದಾಗಿ ಖಾಸಗಿ ವಾಹನಗಳು ಸಂಕಷ್ಟದಲ್ಲಿವೆ. ಈ ನಷ್ಟವನ್ನ ಸರಿದೂಗಿಸಲು ಹಬ್ಬಗಳ ಸಂದರ್ಭದಲ್ಲಿ ದರ ಜಾಸ್ತಿ ಮಾಡ್ತೀವಿ ಅಂತ ಸಮರ್ಥಿಸಿಕೊಳ್ತಿದ್ದಾರೆ. ಒಟ್ಟಾರೆ, ಖಾಸಗಿ ಬಸ್​ಗಳ ದುಪ್ಪಟ್ಟು ರೇಟ್​ಗೆ ಪ್ರಯಾಣಿಕರು ಕಂಗಾಲಾಗಿರೋದಂತೂ ಸುಳ್ಳಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ