ಅಮೆಜಾನ್ನಲ್ಲಿ ಆ ವಸ್ತು ಆರ್ಡರ್ ಮಾಡಿದವನಿಗೆ ಕಾದಿತ್ತು ಶಾಕ್
ಸೋಮವಾರ, 30 ಡಿಸೆಂಬರ್ 2019 (20:16 IST)
ಅಮೆಜಾನ್ ನಲ್ಲಿ ವಸ್ತುವೊಂದನ್ನು ಆರ್ಡರ್ ಮಾಡಿದವನಿಗೆ ಸಖತ್ ಶಾಕ್ ಬಿದ್ದಿದೆ.
ಕೇವಲ 11,990ಕ್ಕೆ ವ್ಯಾಕ್ಯೂಮ್ ಕ್ಲೀನರ್ ಮನೆಗೆ ಬರುತ್ತದೆ ಎಂಬ ಸಂತಸದಲ್ಲಿದ್ದ ಅವರಿಗೆ ಕಾದಿದ್ದು ಮಾತ್ರ ಶಾಕ್. ಕಾರಣ, ಕಂಪನಿಯಿಂದ ಬಂದ ಪಾರ್ಸೆಲ್ ತೆಗೆದು ನೋಡಿದ ಅವರಿಗೆ ಕಂಡಿದ್ದು ಕೇವಲ ಖಾಲಿ ಬಾಕ್ಸ್. ಖಾಲಿ ಬಾಕ್ಸ್ನಲ್ಲಿ ಕೇವಲ ರಟ್ಟುಗಳನ್ನಿಟ್ಟು ರವಾನಿಸಲಾಗಿದೆ.
ಆಫರ್ನಲ್ಲಿ ವ್ಯಾಕ್ಯೂಮ್ ಕ್ಲೀನರ್ ಆರ್ಡರ್ ಮಾಡಿದ ವ್ಯಕ್ತಿಯೊಬ್ಬರಿಗೆ ಖಾಲಿ ಡಬ್ಬವನ್ನು ಕಳುಹಿಸಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದ ಶರಣಗೌಡ ಎಂಬುವವರು ಮೋಸ ಹೋದ ವ್ಯಕ್ತಿ. ಸರ್ಕಾರಿ ನೌಕರರಾಗಿರುವ ಇವರು, ಅಮೆಜಾನ್ ಆಫರ್ನಲ್ಲಿ ಕಡಿಮೆ ಬೆಲೆಗೆ ವ್ಯಾಕ್ಯೂಮ್ ಕ್ಲೀನರ್ ಆರ್ಡರ್ ಮಾಡಿದ್ದಾರೆ.