ಸಾರ್ವಜನಿಕರಿಗೆ ಶಾಕ್ ನೀಡುತ್ತಿರುವ ಮನೆ!

ಶನಿವಾರ, 5 ಜನವರಿ 2019 (20:01 IST)
ಮನೆಯೊಂದರ ಕಾಂಪೌಂಡ್ ಗೆ ವಿದ್ಯುತ್ ಬೇಲಿ ನಿರ್ಮಾಣ ಮಾಡಿದ್ದು, ಅದು ಜನರಿಗೆ ಶಾಕ್ ನೀಡುತ್ತಿದೆ.

ಮನೆ ಕಂಪೌಂಡ್ ಗೆ ವಿದ್ಯುತ್ ಬೇಲಿ ಅಳವಡಿಸಿರುವ ಕಾರಣ ಇದರಿಂದ ಸಾರ್ವಜನಿಕರಿಗೆ ವಿದ್ಯುತ್ ಶಾಕ್ ಹೊಡೆಯುತ್ತಿದೆ.

ಮೂರು ಅಡಿ ಕಾಂಪೌಂಡ್ ಗೆ ವಿದ್ಯುತ್ ಬೇಲಿ ಅಳವಡಿಕೆ ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಚಿಂತಾಮಣಿ ನಗರದ ಮಧ್ಯದಲ್ಲೆ ಇರುವ ಕಾಂಪೌಂಡ್ ವಿದ್ಯುತ್ ಬೇಲಿ ಮನೆ ಸದ್ಯ ಚರ್ಚೆಗೆ ಈಡಾಗಿದೆ. ಹಿರಿಯ ವೈದ್ಯರಾದ ಜಯಂತಮ್ಮನ ಮನೆಗೆ ವಿದ್ಯುತ್ ಬೇಲಿ ಅಳವಡಿಕೆ ಮಾಡಿದ್ದು, ಚಿಕ್ಕಮಕ್ಕಳಿಗೂ ಸಹ ಸಿಗುತ್ತಿರುವ ವಿದ್ಯುತ್ ಬೇಲಿ ಶಾಕ್ ನೀಡುತ್ತಿದೆ.

ನಗರದ ಮನೆ ಕಾಪೌಂಡ್ ಗೆ ವಿದ್ಯುತ್ ಅಳವಡಿಕೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೂ ನಮಗೂ ಸಂಭಂದವಿಲ್ಲದಂತೆ ಬೇಜವಾಬ್ದಾರಿ ವಹಿಸುತ್ತಿದ್ದಾರೆ ಮನೆ ಮಂದಿ.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ